Job Description: * 12 ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ಶುಕ್ರವಾರ ಚಾಲನೆ ಸಿಗಲಿದೆ. * ಈ ಟೂರ್ನಿಗೆ ನ್ಯೂಜಿಲ್ಯಾಂಡ್ ಆತಿಥ್ಯವನ್ನು ವಹಿಸಲಿದೆ. * ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಲಿವೆ. * ದಿನಾಂಕ : 3 ಏಪ್ರಿಲ್ 2022 ರವರೆಗೂ ನಡೆಯಲಿರುವ ಈ ಪಂದ್ಯಗಳಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ. * ಮಾರ್ಚ್ 6 ರಂದು ನಡೆಯಲಿರುವ ಮೊದಲ ಪಂದ್ಯದಲ್ಲೇ ಭಾರತದ ಬದ್ಧ ವೈರಿ ರಾಷ್ಟ್ರ ಪಾಕಿಸ್ತಾನ ತಂಡವು ಭಾರತ ತಂಡದೊಂದಿಗೆ ಮುಖಾಮುಖಿಯಾಗಲಿದೆ. * 6 ಬಾರಿ ಗೆಲುವಿನ ರುಚಿಯ ನೋಡುವ ಮೂಲಕ ಆಸ್ಟ್ರೇಲಿಯಾ ತಂಡವು ಟೂರ್ನಿಯ ಯಶಸ್ವಿ ತಂಡ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದು, ಅದೇ ತೆರನಾಗಿ ಇಂಗ್ಲೆಂಡ್ 4 ಬಾರಿ , ನ್ಯೂಜಿಲ್ಯಾಂಡ್ 1 ಬಾರಿ ಗೆಲುವು ಸಾಧಿಸಿದೆ. * ಭಾರತ ತಂಡವು ಕಳೆದ ಬಾರಿ 'ರನ್ನರ್-ಆಫ್' ಆಗಿ ಹೊರಹೊಮ್ಮಿತ್ತು. * ವಿಶ್ವಕಪ್ ಪ್ರಶಸ್ತಿಗಾಗಿ ಒಟ್ಟು 8 ತಂಡಗಳು ಸೆಣಸಾಡಲಿವೆ.