Job Description: * ಇತ್ತೀಚಿಗೆ ಭಾರತವು ಪಶ್ಚಿಮ ಭಾಗದ ಹಲವು ಜಲ ವಿದ್ಯುತ್ ಯೋಜನೆಗಳ ಕುರಿತ ಹೆಚ್ಚುವರಿ ದತ್ತಾಂಶಗಳನ್ನು ಪಾಕಿಸ್ತಾನದ ಜೊತೆಗೆ ವಿನಿಮಯ ಮಾಡಿಕೊಳ್ಳಲು ಭಾರತವು ಒಪ್ಪಿಗೆಯನ್ನು ನೀಡಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. * ಭಾರತವು ಸಿಂಧೂ ನದಿ ನೀರಿನ ಬಗೆಗಿನ ಇರುವ ಶಾಶ್ವತ ಆಯೋಗದ ಅಡಿಯಲ್ಲಿ 3 ದಿನಗಳ ಕಾಲ ಜರುಗಿದ ಉಭಯ ದೇಶಗಳ ಅಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. * ಇತ್ತೀಚಿಗೆ ಪಾಕಿಸ್ತಾನವು ಭಾರತ ದೇಶವು ಕೈಗೊಂಡಿರುವ 10 ಯೋಜನೆಗಳ ಬಗ್ಗೆ ಪಾಕಿಸ್ತಾನ ರಾಷ್ಟ್ರವು ಆಕ್ಷೇಪವನ್ನು ಹೊರಹಾಕಿದೆ ಎಂದು ಪ್ರಸ್ತುತ ಪಾಕಿಸ್ತಾನದ 'ಡಾನ್ ಪತ್ರಿಕೆ' ಮಾಹಿತಿಯನ್ನು ಬಹಿರಂಗ ಪಡಿಸಿದೆ. * ಪ್ರಸ್ತುತ ಭಾರತದ 10 ಯೋಜನೆಗಳ ಪೈಕಿ 9 ಯೋಜನೆಗಳು 25 MW ವಿದ್ಯುತ್ ಉತ್ಪಾದನೆಯ ಸಣ್ಣ ಸಣ್ಣ ಯೋಜನೆಗಳಾಗಿವೆ. ಮತ್ತೇ ಈ ಯೋಜನೆಗಳ ಪೈಕಿ 624 MW ಕಿರು ಹಾಗೂ 48 MW ವಿದ್ಯುತ್ ಉತ್ಪಾದನೆ ಯೋಜನೆಯ ಲೋವರ್ ಕಾಲನೈ ಒಳಗೊಂಡಂತೆ 5 ಯೋಜನೆಗಳು ಈ ಹಿಂದೆ 1960 ಒಪ್ಪಂದದ ಮಾಹಿತಿಗಳು ಸಮಗ್ರವಾಗಿ ಲಭ್ಯವಿರದ ಹಿನ್ನಲೆಯಿಂದಾಗಿ ಪಾಕಿಸ್ತಾನ ರಾಷ್ಟ್ರವು ಈ ಯೋಜನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ಕಾರಣದಿಂದಾಗಿ ಈ ಎಲ್ಲ ಯೋಜನೆಗಳ ಬಗೆಗಿನ ಹೆಚ್ಚಿನ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ಒದಗಿಸಲಾಗುತ್ತದೆ ಎಂದು ಭಾರತವು ಹೇಳಿಕೆ ನೀಡಿದೆ. * ಭಾರತೀಯ ನದಿಗಳ ಅಂತರ-ಸಂಪರ್ಕವು ಪ್ರಸ್ತಾವಿತ ಬೃಹತ್-ಪ್ರಮಾಣದ ಸಿವಿಲ್ ಎಂಜಿನಿಯರಿಂಗ್ ಯೋಜನೆಯಾಗಿದೆ, ನೀರಾವರಿ ಹಾಗೂ ಅಂತರ್ಜಲ ಮರುಪೂರಣವನ್ನು ವೃದಿಸಲು ಭಾರತೀಯ ನದಿಗಳನ್ನು ಜಲಾಶಯಗಳು ಹಾಗೂ ಕಾಲುವೆಗಳ ಜಾಲದಿಂದ ಸಂಪರ್ಕಿಸುವ ಮೂಲಕ ಭಾರತದಲ್ಲಿ ಜಲ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ನೀರಿನ ನಿರಂತರ ಪ್ರವಾಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. * ಪ್ರಸ್ತುತ ಭಾರತವು ವಿಶ್ವದ ಜನಸಂಖ್ಯೆಯ 18% ಹಾಗೂ ಪ್ರಪಂಚದ ನೀರಿನ ಸಂಪನ್ಮೂಲಗಳ ಸುಮಾರು 4% ರಷ್ಟಿದೆ. ಪ್ರಸ್ತುತ ನದಿಗಳು ಹಾಗೂ ಸರೋವರಗಳನ್ನು ಜೋಡಣೆ ಮಾಡುವದರಿಂದ ದೇಶದಲ್ಲಿನ ನೀರಿನ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ ಎಂದಿದ್ದಾರೆ. * ಇದೀಗ ಭಾರತದಲ್ಲಿ ಸರಾಸರಿ ಮಳೆಯು ಸುಮಾರು 4,000 ಶತಕೋಟಿ ಘನ ಮೀಟರ್ ಆಗಿದೆ, ಆದರೆ ಭಾರತದಲ್ಲಿ ಹೆಚ್ಚಿನ ಮಳೆಯು 4 ತಿಂಗಳ ಅವಧಿಯಲ್ಲಿ ಆಗುತ್ತದೆ. ಅದು ಜೂನ್ ನಿಂದ ಸೆಪ್ಟೆಂಬರ್ ವರೆಗೆ. ಪ್ರಸ್ತುತ ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನು ನದಿಗಳ ಅಂತರ್-ಸಂಯೋಜಕ ಯೋಜನೆಯನ್ನು ಬಳಕೆ ಮಾಡಿಕೊಂಡು ಪ್ರದೇಶಗಳಿಗೆ ಹಾಗೂ ನೀರಿನ ಕೊರತೆಯ ಸಮಯದಲ್ಲಿ ತಲುಪಿಸುವ ಗುರಿಯನ್ನು ಹೊಂದಿದೆ.