Job Description: * ಪ್ರಸ್ತುತ ರಷ್ಯಾ ರಾಷ್ಟ್ರವು ಉಕ್ರೇನ್‌ ಮೇಲೆ ದಾಳಿಯನ್ನು ನಡೆಸುತ್ತಿರುವ ಹಿನ್ನಲೆಯಿಂದಾಗಿ ಅನೇಕ ರಾಷ್ಟ್ರಗಳು ರಷ್ಯಾ ರಾಷ್ಟ್ರವನ್ನು ವಿರೋಧಿಸಿ ಅದರ ಮೇಲೆ ನಿರ್ಬಂಧ ಹೇರುತ್ತಿವೆ. ಇದೀಗ ರಷ್ಯಾ ರಾಷ್ಟ್ರವು ತನ್ನ ಬಾಹ್ಯಾಕಾಶ ರಾಕೆಟ್‌ ಮೇಲೆ ಚಿತ್ರಿಸಿರುವ ಭಾರತದ ತ್ರಿವರ್ಣ ಧ್ವಜವನ್ನು ಬಿಟ್ಟು ಇನ್ನಿತರ ರಾಷ್ಟ್ರಗಳ ಧ್ವಜವನ್ನು ತೆಗೆದು ಹಾಕುತ್ತಿದೆ. * ಪ್ರಸ್ತುತ ಅಮೆರಿಕ, ಬ್ರಿಟನ್‌ ಮತ್ತು ಜಪಾನ್‌ ರಾಷ್ಟ್ರಗಳು ರಷ್ಯಾ ಮೇಲೆ ಹಲವು ಆರ್ಥಿಕ ನಿರ್ಬಂಧಯನ್ನು ಹೇರಿವೆ. ಆದರೆ ಭಾರತ ದೇಶವು ರಷ್ಯಾ ನಡೆಸುತ್ತಿರುವ ದಾಳಿಯ ಬಗ್ಗೆ ಯಾವುದೇ ರೀತಿಯಲ್ಲಿ ವಿರೋಧಿಸುತ್ತಿಲ್ಲ ಅದರಿಂದ ಹಿಂದೆ ಸರಿದಿದೆ ಎಂದು ರಷ್ಯಾದ ಬಾಹ್ಯಾಕಾಶ ಕಾರ್ಯಕ್ರಮ ಹಾಗೂ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾಗಿರುವ ಡಿಮಿಟ್ರಿ ರಾಗೊಜಿನ್‌ ಅವರು ಟ್ವಿಟರ್‌ ನ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. * ಪ್ರಸ್ತುತ ಅಮೆರಿಕ, ಬ್ರಿಟನ್‌ ಹಾಗೂ ಜಪಾನ್‌ ರಾಷ್ಟ್ರಗಳ ಧ್ವಜಗಳನ್ನು ರಷ್ಯಾ ರಾಕೆಟ್‌ ಮೇಲೆ ಚಿತ್ರಿಸಲಾಗಿತ್ತು, ಆದರೆ ಈ ಎಲ್ಲ ದೇಶಗಳ ಧ್ವಜಗಳನ್ನು ರಷ್ಯಾ ರಾಷ್ಟ್ರದ ಸಿಬ್ಬಂದಿಗಳು ತಗೆದುಹಾಕುತ್ತಿರುವದನ್ನು ಇತ್ತೀಚಿಗೆ ವಿಡಿಯೊಗಳಲ್ಲಿ ನೋಡಬಹುದಾಗಿದೆ. * ಇದೀಗ ರಷ್ಯಾ ರಾಷ್ಟ್ರವು ಕಜಕಿಸ್ತಾನದ ಬಾಹ್ಯಾಕಾಶ ಕೇಂದ್ರದಲ್ಲಿ ಸೊಯುಜ್‌ ರಾಕೆಟ್‌ ಮೇಲಿನ ವಿದೇಶಗಳ ಧ್ವಜಗಳನ್ನು ಮುಚ್ಚಿದೆ, ಆದರೆ ಆ ರಾಕೆಟ್‌ನಲ್ಲಿರುವ ಭಾರತದ ತ್ರಿವರ್ಣ ಧ್ವಜವನ್ನು ಮಾತ್ರ ಉಳಿಸಿಕೊಂಡದೆ ಎಂದು ತಿಳಿದು ಬಂದಿದೆ. ಕೆಲವು ರಾಷ್ಟ್ರಗಳ ಧ್ವಜಗಳನ್ನು ನಮ್ಮ ರಾಕೆಟ್ ನ ಮೇಲೆ ಉಳಿಸಿಕೊಳ್ಳವದರಿಂದ ರಾಕೆಟ್‌ ಸುಂದರವಾಗಿ ಕಾಣಲಿದೆ ಎಂದು ರಷ್ಯಾ ಬಾಹ್ಯಾಕಾಶ ಕಾರ್ಯಕ್ರಮಗಳ ಮುಖ್ಯಸ್ಥ ಡಿಮಿಟ್ರಿ ರಾಗೊಜಿನ್‌ ಅವರು ಪ್ರಕಟಣೆಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. * ಇತ್ತೀಚಿಗೆ ಬ್ರಿಟನ್‌ ದೇಶವು ವಿಮಾನಯಾನ ಹಾಗೂ ಬಾಹ್ಯಾಕಾಶ ವಲಯದ ರಷ್ಯಾದ ಕಂಪನಿಗಳು ಬ್ರಿಟನ್‌ನ ವಿಮೆ ಹಾಗೂ ಮರುವಿಮೆ ಸೇವೆಗಳನ್ನು ಬಳಕೆ ಮಾಡಿಕೊಳ್ಳುವದರ ಮೇಲೆ ನಿರ್ಬಂಧವನ್ನು ಹೇರಿದೆ. ಐರೋಪ್ಯ ಒಕ್ಕೂಟ ಸಹ ಹಲವು ಆರ್ಥಿಕ ನಿರ್ಬಂಧಗಳನ್ನು ಹೇರಿದೆ. * ಯುರೋಪಿಯನ್ ಒಕ್ಕೂಟವು SWIFT ಪಾವತಿ ವ್ಯವಸ್ಥೆಯಿಂದ '7' ರಷ್ಯಾದ ಬ್ಯಾಂಕುಗಳನ್ನು ಕಡಿತಗೊಳಿಸಿ ತಕ್ಷಣವೇ ಜಾರಿಗೆ ಬಂದ ಕ್ರಮಗಳನ್ನು ಉಕ್ರೇನ್‌ ನ ಆಕ್ರಮಣಕ್ಕಾಗಿ ರಷ್ಯಾದ ಮೇಲೆ ಹೇರಲಾಗಿದೆ.