Job Description: * ಪ್ರಸ್ತುತ ಬೀಜಿಂಗ್ 2022 ಪ್ಯಾರಾಲಿಂಪಿಕ್ ಚಳಿಗಾಲದ ಆಟಗಳಿಗೆ ರಷ್ಯಾ ಹಾಗೂ ಬೆಲಾರಸ್‌ನಿಂದ ಕ್ರೀಡಾಪಟುಗಳಿಗೆ ಪ್ರವೇಶಗಳನ್ನು ನಿರಾಕರಿಸಲು ನಿರ್ಧರಿಸಿದೆ ಎಂದು ಇತ್ತೀಚಿಗೆ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (IPC) ಆಡಳಿತ ಮಂಡಳಿಯು ಹೇಳಿಕೆ ನೀಡಿದೆ. * ಇದೇ 2022 ರ ಮಾರ್ಚ್. 04 ರಂದು ಆರಂಭವಾಗುವ ಗೇಮ್ಸ್‌ನಲ್ಲಿ IPC ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ IPCಯಲ್ಲಿ ನಾವು ಕ್ರೀಡೆ ಹಾಗೂ ರಾಜಕೀಯವನ್ನು ಬೆರೆಯಬಾರದು ಎಂದಿದ್ದಾರೆ. ಅನೇಕ ಸರ್ಕಾರಗಳು ಪಾಲಿಸಬೇಕಾಗಿರುವ ಘಟನೆಯ ಮೇಲೆ ಪ್ರಭಾವ ಬೀರುತ್ತಿವೆ. ಇದೊಂದು IPC ಸದಸ್ಯತ್ವ-ಆಧಾರಿತ ಸಂಸ್ಥೆಯಾಗಿದೆ ಹಾಗೂ ನಮ್ಮ ಸದಸ್ಯ ಸಂಸ್ಥೆಗಳ ಅಭಿಪ್ರಾಯಗಳನ್ನು ನಾವು ಸ್ವೀಕರಿಸಬೇಕಾಗುತ್ತದೆ ಎಂದಿದ್ದಾರೆ. ಈ ಹಿನ್ನಲೆಯಿಂದಾಗಿ ಆಯಾ ದೇಶಗಳ ಪ್ಯಾರಾ ಕ್ರೀಡಾಪಟುಗಳಿಗೆ ಇನ್ನು ಮುಂದೆ ಭಾಗವಹಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ. * ಈ ಹಿಂದೆ 2021 ರ ಡಿಸೆಂಬರ್'ನಲ್ಲಿ ನಮ್ಮ ಸದಸ್ಯರು ಮಂಡಳಿಯನ್ನು ಆಯ್ಕೆ ಮಾಡುವ ಸಂಧರ್ಭದಲ್ಲಿ ಪ್ಯಾರಾಲಿಂಪಿಕ್ ಚಳುವಳಿಯ ತತ್ವಗಳು, ಮೌಲ್ಯಗಳ ಜೊತೆಗೆ ನಿಯಮಗಳನ್ನು ನಿರ್ವಹಣೆ ಹಾಗೂ ಎತ್ತಿತೋರಿಸುವದು ಮುಖ್ಯವಾಗಿದೆ. ಪ್ರಸ್ತುತ ಮಂಡಳಿಯ ಸದಸ್ಯರಾಗಿರುವ ನಾವುಗಳು ಜವಾಬ್ದಾರಿ ಹಾಗೂ ಕರ್ತವ್ಯವನ್ನು ಪಾಲಿಸಬೇಕಾಗಿದೆ ಎಂದಿದ್ದಾರೆ. ಆದರೆ ವೇಗವಾಗಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯು ನಮ್ಮನ್ನು ಒಂದು ಅನನ್ಯ ಹಾಗೂ ಅಸಾಧ್ಯವಾದ ಸ್ಥಾನದಲ್ಲಿ ನಮ್ಮನು ಇರಿಸಿದೆ ಎಂದಿದ್ದಾರೆ. * ಪ್ರಸ್ತುತ ಬೀಜಿಂಗ್ 2022 ರ ಪ್ಯಾರಾಲಿಂಪಿಕ್ ಚಳಿಗಾಲದ ಕ್ರೀಡಾಕೂಟಕ್ಕೆ ಈ ವಿಷಯವು ಗಂಭೀರ ಪರಿಣಾಮಗಳನ್ನು ಉಂಟುಮಾಡಲಿದೆ ಎಂದಿದ್ದಾರೆ. ಈ ಕ್ರೀಡಾಕೂಟದ ಸಮಗ್ರತೆ ಹಾಗೂ ಎಲ್ಲಾ ಸ್ಪರ್ಧಿಗಳ ಸುರಕ್ಷತೆಯನ್ನ ಕಾಪಾಡುವ ನಿಟ್ಟಿನಲ್ಲಿ, ಆರ್‌ಪಿಸಿ ಹಾಗೂ ಎನ್‌ಪಿಸಿ ಬೆಲಾರಸ್ ಕ್ರೀಡಾಪಟುಗಳ ಪ್ರವೇಶವನ್ನು ನಿರಾಕರಿಸಲು ನಾವುಗಳು ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಐಪಿಸಿ(IPC) ತನ್ನ ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಿದೆ. * ಇಂಟರ್ನ್ಯಾಷನಲ್ ಪ್ಯಾರಾಲಿಂಪಿಕ್ ಕಮಿಟಿ (IPC) ಇದೊಂದು ಅಂತರಾಷ್ಟ್ರೀಯ ಲಾಭೋದ್ದೇಶವಿಲ್ಲದ ಸಂಸ್ಥೆ ಹಾಗೂ ಪ್ಯಾರಾಲಿಂಪಿಕ್ ಚಳುವಳಿಯ ಜಾಗತಿಕ ಆಡಳಿತ ಮಂಡಳಿಯಾಗಿದೆ. ಪ್ರಸ್ತುತ IPC ಪ್ಯಾರಾಲಿಂಪಿಕ್ ಆಟಗಳನ್ನು ನಿಯೋಜಿಸುತ್ತದೆ ಹಾಗೂ '9' ಕ್ರೀಡೆಗಳಿಗೆ ಅಂತರಾಷ್ಟ್ರೀಯ ಒಕ್ಕೂಟವಾಗಿ ಕಾರ್ಯನಿರ್ವಹಿಸುತ್ತದೆ. 1989 ರ ಸೆಪ್ಟೆಂಬರ್. 22 ರಂದು ಪಶ್ಚಿಮ ಜರ್ಮನಿಯ ಡಸೆಲ್ಡಾರ್ಫ್‌ನಲ್ಲಿ ಇದನ್ನು ಸ್ಥಾಪನೆ ಮಾಡಲಾಗಿದೆ. * IPC ಪ್ರಜಾಸತ್ತಾತ್ಮಕ ಸಂವಿಧಾನ ಹಾಗೂ ರಚನೆಯನ್ನು ಒಳಗೊಂಡಿದೆ ಹಾಗೂ 176 ರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಗಳು, ಅಂಗವಿಕಲರ '4' ಅಂತರರಾಷ್ಟ್ರೀಯ ಸಂಸ್ಥೆಗಳು ಹಾಗೂ '5' ಪ್ರಾದೇಶಿಕ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡಿದೆ. ಪ್ರಸ್ತುತ IPC ಯ ಪ್ರಧಾನ ಕಛೇರಿಯು ಜರ್ಮನಿಯ ಬಾನ್‌ನಲ್ಲಿ ನೆಲೆಗೊಂಡಿದೆ.