Job Description: * ಪ್ರಸ್ತುತ ರಷ್ಯಾ ರಾಷ್ಟ್ರವು ಉಕ್ರೇನ್‌ ಮೇಲೆ ದಾಳಿಯನ್ನು ನಡೆಸುತ್ತಿರುವ ಹಿನ್ನಲೆಯಿಂದಾಗಿ ಇದೀಗ ವಿಶ್ವ ಬ್ಯಾಂಕ್ ರಷ್ಯಾ ಹಾಗೂ ಬೆಲಾರಸ್‌ನಲ್ಲಿ ತನ್ನ ಎಲ್ಲಾ ಕಾರ್ಯಕ್ರಮಗಳನ್ನು ತಕ್ಷಣದ ಪರಿಣಾಮದಿಂದಾಗಿ ನಿಲ್ಲಿಸುವುದಾಗಿ ಘೋಷಣೆ ಮಾಡಿದೆ. * ಇದೇ ಫೆಬ್ರವರಿ. 24 ರಂದು, ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆಗಳನ್ನು ಆರಂಭಿಸಿವೆ. ಹೆಚ್ಚಿನ ಸಂಖ್ಯೆಯ ದೇಶಗಳು, ಸಂಸ್ಥೆಗಳು ಹಾಗೂ ವ್ಯವಹಾರಗಳು ಸಂಬಂಧಗಳನ್ನು ಕಳೆದುಕೊಳ್ಳುತ್ತಿರುವ ಹಿನ್ನಲೆಯಿಂದಾಗಿ, ಹಾಗೂ ಉಕ್ರೇನ್‌ನ ದೇಶದ ಮೇಲಿನ ಆಕ್ರಮಣದಿಂದ ರಷ್ಯಾ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ಹೇರುವದಾಗಿ ವಿಶ್ವಬ್ಯಾಂಕ್'ನ ಈ ನಿರ್ಧಾರ ಕೈಗೊಂಡಿದೆ. * ಪ್ರಸ್ತುತ ವಾಷಿಂಗ್ಟನ್ ಮೂಲದ ಜಾಗತಿಕ ಬ್ಯಾಂಕ್ ಹೇಳಿಕೆ ನೀಡಿರುವ ಪ್ರಕಾರ ಈ ಹಿಂದೆ 2014 ರಿಂದ ವಿಶ್ವ ಬ್ಯಾಂಕ್ ಗ್ರೂಪ್ ರಷ್ಯಾ ದೇಶಕ್ಕೆ ಯಾವುದೇ ರೀತಿಯ ಹೊಸ ಸಾಲ ಅಥವಾ ಹೂಡಿಕೆಗಳಿಗೆ ಅನುಮೋದನೆಯನ್ನು ನೀಡಿಲ್ಲ. ಅದೇ ರೀತಿಯಲ್ಲಿ 2020 ರ ಮಧ್ಯದಿಂದ ಬೆಲಾರಸ್‌ಗೆ ಯಾವುದೇ ರೀತಿಯ ಹೊಸ ಸಾಲವನ್ನು ಅಥವಾ ಹೂಡಿಕೆಗಳಿಗೆ ಅನುಮೋದನೆಯನ್ನು ನೀಡಿಲ್ಲ ಎಂದು ತಿಳಿಸಿದೆ. * ಪ್ರಸ್ತುತ ರಷ್ಯಾ ರಾಷ್ಟ್ರವು ಉಕ್ರೇನ್‌ ಮೇಲೆ ಆಕ್ರಮಣ ಮಾಡಿರುವ ಹಿನ್ನಲೆಯಿಂದ ಹಾಗೂ ಅಲ್ಲಿನ ಜನರ ವಿರುದ್ಧದ ಹಗೆತನದಿಂದಾಗಿ ವಿಶ್ವ ಬ್ಯಾಂಕ್ ಗುಂಪು ರಷ್ಯಾ ಹಾಗೂ ಬೆಲಾರಸ್‌ನಲ್ಲಿ ತನ್ನ ಎಲ್ಲಾ ಕಾರ್ಯಗಳನ್ನು ತಕ್ಷಣವೇ ನಿಲ್ಲಿಸುವದಾಗಿ ಹೇಳಿಕೆ ನೀಡಿದೆ. * ವಿಶ್ವ ಬ್ಯಾಂಕ್ ಇದೊಂದು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯಾಗಿದೆ, ಈ ಬ್ಯಾಂಕ್ ಬಂಡವಾಳ ಯೋಜನೆಗಳನ್ನು ಅನುಸರಿಸುವ ಉದ್ದೇಶದಿಂದ ಕಡಿಮೆ ಹಾಗೂ ಮಧ್ಯಮ-ಆದಾಯದ ದೇಶಗಳ ಸರ್ಕಾರಗಳಿಗೆ ಸಾಲದ ರೂಪದಲ್ಲಿ ಅನುದಾನವನ್ನು ನೀಡುತ್ತದೆ. ವಿಶ್ವಬ್ಯಾಂಕ್ ಎನ್ನುವದು ಇಂಟರ್ನ್ಯಾಷನಲ್ ಬ್ಯಾಂಕ್ ಫಾರ್ ರೀಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ (IBRD) ಮತ್ತು ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ಅಸೋಸಿಯೇಷನ್ (IDA) ಗಳ ಸಾಮೂಹಿಕ ಹೆಸರಾಗಿದೆ. ಇದನ್ನು ಈಹಿಂದೆ 1944 ರ ಬ್ರೆಟನ್ ವುಡ್ಸ್ ಸಮ್ಮೇಳನದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸಹಾಯದಿಂದ ಸ್ಥಾಪನೆ ಮಾಡಲಾಗಿದೆ. ಈ ಬ್ಯಾಂಕ್'ನಿಂದ ಮೊದಲ ಸಾಲವನ್ನು ಈ ಹಿಂದೆ 1947 ರಲ್ಲಿ ಫ್ರಾನ್ಸ್‌ಗೆ ನೀಡಿದೆ. * ಪ್ರಸ್ತುತ ವಿಶ್ವ ಬ್ಯಾಂಕ್'ನ್ನು ಅಧ್ಯಕ್ಷರು ಹಾಗೂ 25 ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ 29 ವಿವಿಧ ಉಪಾಧ್ಯಕ್ಷರು ಮುನ್ನಡೆಸುತ್ತಾರೆ. IBRD ಹಾಗೂ IDA ಕ್ರಮವಾಗಿ 189 ಹಾಗೂ 174 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿವೆ. US, ಜಪಾನ್, ಚೀನಾ, ಜರ್ಮನಿ ಹಾಗೂ UK ಅಧಿಕ ಮತದಾನದ ಶಕ್ತಿಯನ್ನು ಒಳಗೊಂಡಿವೆ. ವರ್ಲ್ಡ್ ಬ್ಯಾಂಕ್ ಬಡತನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಾಲವನ್ನು ನೀಡುತ್ತದೆ. * ಪ್ರಸ್ತುತ ವಿಶ್ವಬ್ಯಾಂಕ್ ಹಣದುಬ್ಬರಕ್ಕೆ ಉತ್ತೇಜನ ನೀಡುತ್ತದೆ, ಹಾಗೂ ಆರ್ಥಿಕ ಅಭಿವೃದ್ಧಿಗೆ ಹಾನಿ ಉಂಟು ಮಾಡುತ್ತದೆ ಎಂದು ಅನೇಕರಿಂದ ಆಡಳಿತದ ರೀತಿಯನ್ನು ಟೀಕಿಸಲಾಗಿದೆ. ಅಷ್ಟೇ ಅಲ್ಲದೇ ಬ್ಯಾಂಕ್ ವಿರುದ್ಧ ಅನೇಕ ಬಾರಿ ಪ್ರತಿಭಟನೆಗಳು ನಡೆದಿವೆ.