Job Description: * ಇತ್ತೀಚಿಗೆ ಹೈಕೋರ್ಟ್ ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಎಂದು ಮಹತ್ವದ ತೀರ್ಪುನ್ನು ನೀಡಿದೆ. ಒಂದು ರಾಜ್ಯಕ್ಕೆ '3' ರಾಜಧಾನಿಗಳಿರಲು ಸಾಧ್ಯವಿಲ್ಲ ಎಂದು ತೀರ್ಪಿನ ಮೂಲಕ ತಿಳಿಸಿದೆ. * ಈ ಹಿಂದೆ ಆಂಧ್ರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ಅವರ '3' ರಾಜಧಾನಿಗಳನ್ನೂ ಘೋಷಣೆ ಮಾಡಿದ್ದರು ಆದರೆ ಇದೀಗ ಆ ವಿಚಾರವನ್ನು ಕೈಬಿಟ್ಟಿದ್ದಾರೆ, ಪ್ರಸ್ತುತ ಹೈಕೋರ್ಟ್ ನೀಡಿರುವ ಸೂಚನೆಯ ಪ್ರಕಾರ ಅಮರಾವತಿಯನ್ನೇ ಆಂಧ್ರ ಪ್ರದೇಶದ ರಾಜಧಾನಿಯಾಗಿ ಅಭಿವೃದ್ಧಿಪಡಿಸಿ ಎಂದು ಹೇಳಿಕೆ ನೀಡಿದೆ. * ಆಂಧ್ರ ಪ್ರದೇಶ ರಾಜ್ಯದ '3' ರಾಜಧಾನಿ ಹಾಗೂ ಸಿಆರ್‍ಡಿಪಿ ರದ್ದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಕೈಗೊಂಡಿರುವ ನ್ಯಾಯಪೀಠ ಸಿಆರ್‍ಡಿಪಿ ಕಾಯ್ದೆ ಪ್ರಕಾರವೇ ಆಂಧ್ರ ಸರ್ಕಾರವು ಆಡಳಿತವನ್ನು ನಡೆಸಬೇಕು. ಅಷ್ಟೇ ಅಲ್ಲದೇ ಈ ಹಿಂದೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಇನ್ನು '6' ತಿಂಗಳಲ್ಲಿ ರಾಜಧಾನಿ ಅಮರಾವತಿಯನ್ನು ಅಭಿವೃದ್ಧಿಗೊಳಿಸಬೇಕು ಹಾಗೂ ಭೂಮಿಯನ್ನು ನೀಡಿರುವ ರೈತರಿಗೆ '3' ತಿಂಗಳಲ್ಲಿ ಪರ್ಯಾಯ ಭೂಮಿ ಒದಗಿಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆಯನ್ನು ನೀಡಿದೆ. * ಪ್ರಸ್ತುತ ಅಮರಾವತಿ ಪ್ರದೇಶವನ್ನು ರಾಜಧಾನಿ ಮಾಡಲು ಭೂಮಿಯನ್ನು ನೀಡಿರುವ ರೈತರಿಗೆ ಅಗತ್ಯವಿರುವ ಮೂಲ ಸೌಕರ್ಯವನ್ನು ಕಲ್ಪಿಸಿ ನಿವೇಶನಗಳನ್ನು ನೀಡಬೇಕು ಅಷ್ಟೇ ಅಲ್ಲದೇ ಸರ್ಕಾರದ ಅಧೀನಕ್ಕೆ ಪಡೆದುಕೊಂಡಿರುವ ಭೂಮಿಯನ್ನು ರಾಜಧಾನಿ ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು ಇನ್ನಿತರೇ ಯಾವುದೇ ಕಾರ್ಯಗಳಿಗೆ ಉಪಯೋಗಿಸುವಂತಿಲ್ಲ ಎಂದು ಸೂಚಿಸಿದೆ. ಇವೆಲ್ಲದರ ಜೊತೆಗೆ ರಾಜಧಾನಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಕೋರ್ಟ್‍ಗೆ ಕಾಲಕಾಲಕ್ಕೆ ಮಾಹಿತಿ ಒದಗಿಸಬೇಕು ಎಂದು ಕೋರ್ಟ್ ಸೂಚಿಸಿದೆ. * ಹೈಕೋರ್ಟ್ ಸೂಚನೆಯ ಪ್ರಕಾರ ಅಮರಾವತಿ ರಾಜಧಾನಿಗಾಗಿ ಈ ಮೊದಲು ರೂಪಿಸಿರುವ ಯೋಜನೆಗಳನ್ನೂ ಮುನ್ನಡೆಸಬೇಕು ಎಂದಿದೆ. ಹಾಗೂ ಸಿಆರ್‍ಡಿಪಿ ಕಾಯ್ದೆ ಪ್ರಕಾರ ಸರ್ಕಾರವು ತನ್ನ ಆಡಳಿತವನ್ನು ನಡೆಸಬೇಕು ಎಂದು ಕೋರ್ಟ್ ಸೂಚಿಸಿದೆ. * ಅಮರಾವತಿ ನಗರವು ಭಾರತದ ಆಂಧ್ರಪ್ರದೇಶ ರಾಜ್ಯದ ರಾಜಧಾನಿಯಾಗಿದೆ. ಈ ನಗರ ಪ್ರದೇಶವು ಕೃಷ್ಣಾ ನದಿಯ ದಡದಲ್ಲಿದೆ. ಅಮರಾವತಿಯನ್ನು 2,200 ವರ್ಷಗಳ ಹಿಂದೆ ಸ್ಥಾಪನೆ ಮಾಡಲಾಗಿದೆ, ಇದೊಂದು ಪ್ರಾಚೀನ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅಮರಾವತಿಯು ಪ್ರಮುಖ ಬೌದ್ಧರ ಪವಿತ್ರ ಕಲಿಕೆಯ ತಾಣವಾಗಿತ್ತು. ಈ ಹಿಂದೆ ಬ್ರಿಟಿಷ್ ರಾಜರ್ ಅಡಿಯಲ್ಲಿ ಅಲ್ಲಿನ ಅನೇಕ ಪ್ರಾಚೀನ ಬೌದ್ಧ ಅವಶೇಷಗಳನ್ನು ಬ್ರಿಟನ್ ಹಾಗೂ ಭಾರತದಲ್ಲಿನ ಇತರ ವಸ್ತುಸಂಗ್ರಹಾಲಯಗಳಿಗೆ ತಗೆದುಕೊಂಡು ಹೋಗಲಾಗಿದೆ. * ಅಮರಾವತಿಯು ಶಾತವಾಹನ ರಾಜವಂಶದ ಪ್ರಾಚೀನ ರಾಜಧಾನಿಯಾದ ಐತಿಹಾಸಿಕ ಅಮರಾವತಿ ಗ್ರಾಮದಿಂದ ಬಂದಿದೆ. ಗುಂಟೂರು, ವಿಜಯವಾಡ ಹಾಗೂ ತೆನಾಲಿ ಮಹಾನಗರಗಳು ಅಮರಾವತಿಯ ಪ್ರಮುಖ ನಗರಗಳಾಗಿವೆ. ಈ ಅಮರಾವತಿ ನಗರವು ಅಕ್ಷರಶಃ 'ಅಮರಸ್ಥರ ಸ್ಥಳ' ಎಂದು ಅನುವಾದಿಸಲಾಗುತ್ತದೆ.