* ಭಾರತದ ಗಡಿ ರಸ್ತೆ ಸಂಸ್ಥೆಯು (BRO) ಚೀನಾದ ಗಡಿಯಲ್ಲಿರುವ ಉತ್ತರಾಖಂಡ ರಾಜ್ಯದ ಮಾಣಾ ಎಂಬ ಹಳ್ಳಿಯು 'ಭಾರತದ ಮೊದಲ ಗ್ರಾಮ' ಎಂದು ಬರೆದಿರುವ ಫಲಕವನ್ನು ಹಾಕಿಕೊಂಡಿದ್ದು,  ಮಾಣಾ ಗ್ರಾಮವು ಚಮೋಲಿ ಜಿಲ್ಲೆಯಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿದೆ ಈ ಗ್ರಾಮವನ್ನು ಭಾರತದ ಕೊನೆಯ ಗ್ರಾಮ ಎಂದು ಎನ್ನಲಾಗುತ್ತದೆ.* ಮಾಣಾ ಗ್ರಾಮವು ಇನ್ನು ಮುಂದೆ ಭಾರತದ ಕೊನೆಯ ಗ್ರಾಮವಲ್ಲ, ಅದು 'ಭಾರತದ ಮೊದಲ ಗ್ರಾಮ'ಎನ್ನಲಾಗಿದ್ದು, ಗಡಿ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಧಾಮಿ ಯವರು ತಿಳಿಸಿದ್ದಾರೆ.