* ಪ್ರತಿ ವರ್ಷ ಏಪ್ರಿಲ್ 26 ರಂದು ಅಂತಾರಾಷ್ಟ್ರೀಯ ಚೆರ್ನೋಬಿಲ್ ದುರಂತದ ಸ್ಮರಣ ದಿನವನ್ನು ಪ್ರಾಣ ಕಳೆದುಕೊಂಡವರ ಸ್ಮರಣೆ ಮತ್ತು ಗೌರವಾರ್ಥವಾಗಿ ಆಚರಿಸಲಾಗಿದ್ದು, ಕುಖ್ಯಾತ ಚೆರ್ನೋಬಿಲ್ ದುರಂತವು ಏಪ್ರಿಲ್ 26, 1986 ರಂದು ಹಿಂದಿನ ಸೋವಿಯತ್ ಒಕ್ಕೂಟದ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸಂಭವಿಸಿತು. * ವಿಶ್ವ ಆರೋಗ್ಯ ಸಂಸ್ಥೆ (WHO)ಯ ಅಂದಾಜು 3940 ಜನರು ವಿಕಿರಣ ವಿಷದಿಂದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸುಲಾಗಿದ್ದು, ಅಪಘಾತದ 30 ನೇ ವಾರ್ಷಿಕೋತ್ಸವದ ನಂತರ, ಡಿಸೆಂಬರ್ 8, 2016 ರಂದು, ವಿಶ್ವಸಂಸ್ಥೆಯು ನಿರ್ಣಯವನ್ನು ಅಂಗೀಕರಿಸಿತು ಮತ್ತು ಏಪ್ರಿಲ್ 26 ರಂದು  ಅಂತರರಾಷ್ಟ್ರೀಯ ಚೆರ್ನೋಬಿಲ್ ದುರಂತದ ಸ್ಮರಣಾರ್ಥ ದಿನವೆಂದು ಘೋಷಿಸಿತು.