* ವಿಶ್ವಸಂಸ್ಥೆಯ (ಯುಎನ್) ಇತ್ತೀಚಿನ ವರದಿಯ ಪ್ರಕಾರ, ಭಾರತೀಯ ಸರ್ಕಾರಿ ಸ್ವಾಮ್ಯದ ಕಂಪನಿಗಳು ಮತ್ತು ದೇಶದಲ್ಲಿನ ಖಾಸಗಿ ಸಂಸ್ಥೆಗಳು ₹ 422 ಕೋಟಿ (ಅಂದಾಜು $ 51 ಮಿಲಿಯನ್) ಮೌಲ್ಯದ ಶಸ್ತ್ರಾಸ್ತ್ರಗಳು, ಎರಡು ಬಳಕೆಯ ವಸ್ತುಗಳು ಮತ್ತು ಕಚ್ಚಾ ವಸ್ತುಗಳನ್ನು ಮ್ಯಾನ್ಮಾರ್‌ನ ಮಿಲಿಟರಿ ಜುಂಟಾಗೆ ಪೂರೈಸಿವೆ ಎಂದು ವಿಶ್ವಸಂಸ್ಥೆಯ (ಯುಎನ್)ವರದಿಯು ತಿಳಿಸಿದೆ.* ಭಾರತವು ಮ್ಯಾನ್ಮಾರ್ ಜುಂಟಾಗೆ ಕಣ್ಗಾವಲು, ಫಿರಂಗಿ ಮತ್ತು ಕ್ಷಿಪಣಿಗಳಲ್ಲಿ ಬಳಸಲಾಗುವ ಸರಬರಾಜು ವಸ್ತುಗಳು ಸಾಂಪ್ರದಾಯಿಕ ಅಂತರಾಷ್ಟ್ರೀಯ ಕಾನೂನು ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಸಂಭಾವ್ಯವಾಗಿ ಉಲ್ಲಂಘಿಸಬಹುದು ಎಂದು ವರದಿ ಸೂಚಿಸುತ್ತದೆ.