Job Description: * ಭಾರತ ದೇಶದಲ್ಲಿ "ಹುಲಿಗಳ ಯೋಜನೆ" ಪ್ರಾರಂಭವಾಗಿದ್ದು, 2022 ರ ಹುಲಿಗಳ ಗಣತಿ ಪ್ರಕಾರ ದೇಶದಲ್ಲಿ ಒಟ್ಟು 3167 ಹುಲಿಗಳಿವೆ ಎಂದು ವರದಿ ಹೇಳುತ್ತದೆ. * 2006ರಲ್ಲಿ ಅಂಕಿಅಂಶಗಳ ಪ್ರಕಾರ ಭಾರತ ದೇಶದಲ್ಲಿನ ಹುಲಿಗಳ ಸಂಖ್ಯೆ 1,411 ಇತ್ತು, 2010ರ ಗಣತಿಯಲ್ಲಿ 1,706 ಆಗಿದೆ. ಹಾಗೂ 2014ರ ದತ್ತಾಂಶಗಳ ಪ್ರಕಾರ 2,226 ಆಗಿದ್ದರೆ 2018ರಲ್ಲಿ 2,967ಕ್ಕೆ ಏರಿಕೆಯಾಗಿದೆ.* 2022ರಲ್ಲಿ ನಡೆಸಿದ್ದ ಗಣತಿಯಲ್ಲಿ 3,167 ಹುಲಿಗಳಿವೆ' ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಹುಲಿ ಸಂರಕ್ಷಣೆಯ ದೃಷ್ಟಿಕೋನವನ್ನು ಪ್ರಸ್ತುತಪಡಿಸುವ ಅಮೃತ್ ಕಾಲ್ ಕಾ ಟೈಗರ್ ವಿಷನ್ ಎಂಬ ಕಿರುಪುಸ್ತಕವನ್ನು ಮೋದಿ ಅವರು ಬಿಡುಗಡೆ ಮಾಡಿದರು.