Job Description: * ಆರ್ಲಿಯಾನ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಲಿಯಲ್ಲಿ ಭಾರತದ ಪ್ರಿಯಾಂಶು ರಾಜಾವತ್ ರವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. * ಭಾರತ ಮೂಲದ ಯುವ ಬ್ಯಾಡ್ಮಿಂಟನ್ ಆಟಗಾರ ಪ್ರಿಯಾಂಶು ರಾಜಾವತ್ ರವರು ಆರ್ಲಿಯನ್ (ಫ್ರಾನ್ಸ್) ನಲ್ಲಿ “ಓರ್ಲೀನ್ಸ್ ಮಾಸ್ಟರ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ. * 2022 ರಲ್ಲಿ ರಾಜಾವತ್ ಓರ್ಲೀನ್ಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಪ್ರಶಸ್ತಿ ಗೆಲ್ಲಲು ಆಗಿರಲಿಲ್ಲ 2023 ರ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಪದಕ ಪಡೆದುಕೊಂಡಿದ್ದಾರೆ. * ಏಪ್ರಿಲ್ 09 ರಂದು ನಡೆದ ಫೈನಲ್ ನಲ್ಲಿ ವಿಶ್ವ ರ್ಯಂಕಿಂಗ್ 49ನೇ ಶ್ರೇಯಾಂಕದ ಡೆನ್ಮಾರ್ಕ್‌ನ ಮ್ಯಾಗ್ನಸ್ ಜೊನಾಸೆನ್ ವಿರುದ್ಧ 58ನೇ ಶ್ರೇಯಾಂಕದ ಪ್ರಿಯಾಂಶು ರಾಜಾವತ್ ರವರು 21-15, 19-21, 21-16 ಅಂತರದಿಂದ ಚಾಂಪಿಯನ್ ಆದರು.