Job Description: * ಏಪ್ರಿಲ್ 12 ರಂದು ನದಿ ಕೆಳಗಿನ ಸುರಂಗ ಮಾರ್ಗದಲ್ಲಿ ಚಲಿಸುವ ದೇಶದ ಮೊದಲ ಮೆಟ್ರೋ ರೈಲು ಕೋಲ್ಕತಾದ ಹೂಗ್ಲಿ ನದಿಯ ಆಳದಲ್ಲಿ ಯಶಸ್ವಿಯಾಗಿ ಸಂಚರಿಸಿತು. ಮೊದಲ ಬಾರಿಗೆ ದೇಶದಲ್ಲಿ ನೀರಿನೊಳಗೆ ಸಂಚರಿಸುವ ಮೆಟ್ರೋ ಇದಾಗಿದ್ದು, ಈ ಮೂಲಕ ಕೋಲ್ಕತಾ ಮೆಟ್ರೋ ಹೊಸ ಇತಿಹಾಸ ನಿರ್ಮಿಸಿದೆ.* ಕೋಲ್ಕತಾದ ಮಹಾಕರಣ್ ಮತ್ತು ಹೌರಾ ಮೈದಾನ್ ಸ್ಟೇಷನ್ ನಡುವಿನ 10.8 ಕಿ.ಮೀ ವ್ಯಾಪ್ತಿಯಲ್ಲಿ ಸುರಂಗ ನಿರ್ಮಿಸಲಾಗಿದ್ದು, ಈ ಪೈಕಿ 1706 ಅಡಿಯಷ್ಟು ಉದ್ದದ ಮಾರ್ಗವು ಹೂಗ್ಲಿ ನದಿಯ ಅಡಿಯಲ್ಲಿ ಬರುತ್ತದೆ.* ಹೂಗ್ಲಿ ನದಿಯ ಅಡಿಯಲ್ಲಿ ಹೋಗುವ ಮೆಟ್ರೋ ರೈಲು ಮಾರ್ಗವನ್ನು ನದಿ ಮೇಲಿನಿಂದ 104 ಅಡಿ ಆಳದಲ್ಲಿ ನಿರ್ಮಿಸಲಾಗಿದೆ. ಈ ನದಿ ಮಾರ್ಗದ ಭಾಗವನ್ನು ರೈಲು 45 ಸೆಕೆಂಡ್‌ಗಳಲ್ಲಿ ಕ್ರಮಿಸಲಿದೆ.