Job Description: * ಇತ್ತೀಚೆಗೆ ಭಾರತದಲ್ಲಿ ಬುಷ್ ಕ್ರಿಕೆಟ್ಸ್‌ನ ಮೂರು ಹೊಸ ತಳಿಗಳನ್ನು ಆರಿಣಿ ಘೋಷ್ ಮತ್ತು ರಂಜನಾ ಜೈಸ್ವಾರ ನೇತೃತ್ವದ ತಂಡವೊಂದು ಪತ್ತೆ ಹಚ್ಚಿದೆ.* ಈ ಹೊಸ ಪ್ರಭೇದಗಳು ಹೆಕ್ಸಾಸೆಂಟ್ರಸ್ ಕ್ರಿಕೆಟ್ ಕುಟುಂಬದ ಸದಸ್ಯ ತಳಿಗಳಾಗಿದ್ದು, ಇವುಗಳು 60 ಕಿಲೋಹರ್ಟ್ಸ್‌ವರೆಗಿನ ಅಲ್ಟಾಸೋನಿಕ್ ಶಬ್ದವನ್ನು ಉತ್ಪಾದಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿವೆ.* ಬುಷ್ ಕ್ರಿಕೆಟ್ಸ್‌ನ ಮೂರು ಹೊಸ ತಳಿಗಳಲ್ಲಿ ಕಂಡುಬಂದಿರುವ 3 ಹೊಸ ಪ್ರಬೇಧಗಳ ನಾಮಕರಣವು ಈ ಕೆಳಗಿನಂತಿದೆ : - ಸಂಶೋಧಕರು ಮೇಘಾಲಯದಲ್ಲಿ ಪತ್ತೆ ಮಾಡಿರುವ ಪ್ರಭೇದಕ್ಕೆ ಹೆಕ್ಸಾಸೆಂಟ್ರಸ್ ಖಾಸಿಯೆನ್ಸಿಸ್ - ಹರಿಯಾಣಾದ ಸೋನೆಪತ್ ಜಿಲ್ಲೆಯಲ್ಲಿ ಕಂಡು ಹಿಡಿದ ತಳಿಗಳಿಗೆ ಹೆಕ್ಸಾಸೆಂಟ್ರಸ್ ಅಶೋಕ - ಹರಿಯಾಣಾದ ಸೋನೆಪತ್ ಜಿಲ್ಲೆಯಲ್ಲಿ ಕಂಡು ಹಿಡಿದ ಮೇತ್ತೊಂದು ತಳಿಗೆ ಹೆಕ್ಸಾಸೆಂಟ್ರಸ್ ಟಿಡೇ ಎಂದು ನಾಮಕರಣ ಮಾಡಿದ್ದಾರೆ. * ಹೆಕ್ಸಾಸೆಂಟ್ರಸ್ ಕ್ರಿಕೆಟ್ ಕುಟುಂಬ ಉತ್ಪಾದಿಸುವ 60 ಕೆಎಚ್ ಝಡ್ ಅಲ್ಟಾಸೋನಿಕ್ ಶಬ್ದವು ಮಾನವಜೀವಿ ತಡೆದುಕೊಳ್ಳುವ ಮಿತಿಗಿಂತಲೂ ಹೆಚ್ಚಿನದ್ದಾಗಿದೆ. ಅವುಗಳು ಮಾಡುವ ಸದ್ದು ಅಸಹಜವಾದ ಯಾಂತ್ರಿಕ ಶಬ್ದವಾಗಿದ್ದು ಇತರ ಹೆಕ್ಸಾಸೆಂಟ್ರಸ್ ಕ್ರಿಕೆಟ್ ಗಳಿಗೆ ಕೇಳಿಸುತ್ತದೆ.* ಹೆಕ್ಸಾಸೆಂಟ್ರಸ್ ಕ್ರಿಕೆಟ್ ಪ್ರಭೇದಗಳು ಮುಖ್ಯವಾಗಿ ಪೊದೆಗಳಲ್ಲಿ ವಾಸವಾಗುತ್ತವೆ. ಅವು ಹೆಚ್ಚಾಗಿ ಪರಭಕ್ಷಕ ಗುಣ ಹೊಂದಿದ್ದು ಮುಖ್ಯವಾಗಿ ಚಿಕ್ಕ ವಯಸ್ಕ ಕೀಟಗಳು ಅಥವಾ ಲಾರ್ವಾವನ್ನು ತಿಂದು ಬದುಕುತ್ತವೆ. ಹೆಕ್ಸಾಸೆಂಟ್ರಸ್ ಖಾಸಿಯೆನ್ಸಿಸ್‌ನ ವಿಶಿಷ್ಟ ಗಾತ್ರ ಮತ್ತು ಶಬ್ದದ ಮೇಲೆ ಬೆಳಕು ಚೆಲ್ಲುತ್ತದೆನ್ನುವುದು ಈ ಸಂಶೋಧನೆಯ ಮಹತ್ವವಾಗಿದೆ.