Job Description: * ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023'ದಲ್ಲಿ ಮಂಥನ್ ಕಾರ್ಯಕ್ರಮವೂ ರಕ್ಷಣಾ ವಲಯಕ್ಕೆ ಮತ್ತಷ್ಟು ಶಕ್ತಿ ತರಲಿದೆ.* ಮಂಥನ್‌ನಲ್ಲಿ ಸೈಬರ್ ಭದ್ರತೆ ಸಂಬಂಧಿಸಿದ ನವೋದ್ಯಮಕ್ಕೆ ಅಧಿಕೃತವಾಗಿ ಚಾಲನೆ ದೊರೆಯಲಿದ್ದು, ಹೊಸ ಆವಿಷ್ಕಾರ, ನವೋದ್ಯಮ, ಎಂಎಸ್‌ಎಂಇ, ಇನ್‌ಕ್ಯುಬೇಟರ್, ಅಕಾಡೆಮಿ ಮತ್ತು ಹೂಡಿಕೆದಾರರನ್ನು ಒಂದೇ ಸೂರಿನಡಿ ತರಲಾಗುತ್ತದೆ. * ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ 2 (ಐಡೆಕ್ಸ್) ರಕ್ಷಣಾ ಸಚಿವಾಲಯದ ಪ್ರಮುಖ ಯೋಜನೆಯಾಗಿದೆ. 2018-19ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದರು. * ರಕ್ಷಣಾ ಮತ್ತು ವಿಮಾನಯಾನ ಕ್ಷೇತ್ರದಲ್ಲಿ, ನಾವೀನ್ಯತೆ, ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ. ಈ ಕುರಿತು ಐಡೆಕ್ಸ್‌ ಸಂಸ್ಥೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಅನುದಾನ ಸೇರಿ ಇತರ ಪ್ರೋತ್ಸಾಹಗಳನ್ನು ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿದೆ. ಇದು ದೇಶದ ರಕ್ಷಣಾ ಮತ್ತು ವಿಮಾನಯಾನ ಕ್ಷೇತ್ರದ ಬಲವರ್ಧನೆಗೆ ಅನುಕೂಲವಾಗಲಿದೆ.