Job Description: * ಆಕ್ಷೇಪಾರ್ಹ ಅಥವಾ ಧಾರ್ಮಿಕ ನಿಂದನೆಯ ವಿಚಾರಗಳನ್ನು ತೆಗೆದುಹಾಕಲು ವೆಬ್‌ಸೈಟ್ ನಿರಾಕರಿಸಿದ ಕಾರಣ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ವಿಕಿಪೀಡಿಯಾವನ್ನು ನಿರ್ಬಂಧಿಸಿದೆ.* ವಿಕಿಮೀಡಿಯ ಫೌಂಡೇಶನ್‌ನ ವೆಬ್‌ಸೈಟ್‌ನಲ್ಲಿ ಧರ್ಮನಿಂದನೆಯ ವಿಷಯವಿತ್ತು. ಹೀಗಾಗಿ, ಸುಪ್ರೀಂಕೋರ್ಟ್‌ನ ಸೂಚನೆಯ ಮೇರೆಗೆ ಪಿಟಿಎಯು 48 ಗಂಟೆಗಳ ಕಾಲ ವಿಕಿಪೀಡಿಯ ಮತ್ತು ವಿಕಿಮೀಡಿಯ ಯೋಜನೆಗಳಿಗೆ ನಿರ್ಬಂಧ ವಿಧಿಸಿದೆ.* ಪಾಕಿಸ್ತಾನ ಸರಕಾರವು ವಿಕಿಪೀಡಿಯವನ್ನು "ಕಾನೂನುಬಾಹಿರ" ಎಂದು ಪರಿಗಣಿಸಿತ್ತು. ಈ ನಿರ್ಬಂಧವನ್ನು ತೆಗೆದುಹಾಕುವಂತೆ ವಿಕಿಮೀಡಿಯಾ ಫೌಂಡೇಶನ್‌ ವಿನಂತಿ ಮಾಡಿದ್ದರೂ ಸಹ ಉಪಯೋಗವಾಗಲಿಲ್ಲ. "ಫೆಬ್ರವರಿ 3ರ ಶುಕ್ರವಾರ ಪಾಕಿಸ್ತಾನದ ದೂರಸಂಪರ್ಕ ಪ್ರಾಧಿಕಾರವು ವಿಕಿಪೀಡಿಯ ಮತ್ತು ವಿಕಿಮೀಡಿಯ ಪ್ರಾಜೆಕ್ಟ್‌ಗಳನ್ನು ನಿರ್ಬಂಧಿಸಿದೆ. ಈ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ವಿಕಿಮೀಡಿಯ ಫೌಂಡೇಶನ್‌ ಪಾಕಿಸ್ತಾನಕ್ಕೆ ಮನವಿ ಮಾಡಿದೆʼʼ ಎಂದು ವೀಕಿಮೀಡಿಯಾ ಫೌಂಡೇಶನ್‌ ತಿಳಿಸಿದೆ.