Job Description: * ಕೇರಳದ ಲಿಂಗತ್ವ ಅಲ್ಪಸಂಖ್ಯಾತ ದಂಪತಿ ಜಿಯಾ ಪಾವಲ್ ಮತ್ತು ಜಿಹಾದ್ ಮಾರ್ಚ್ ನಲ್ಲಿ ತಮ್ಮ ಮೊದಲ ಮಗುವಿನ ನಿರೀಕ್ಷೆ ಹೊಂದಿದ್ದಾರೆ. ಭಾರತ ದೇಶದಲ್ಲಿಯೇ ಇದು ಪ್ರಥಮ ಪ್ರಕರಣವಾಗಿದೆ. ನೃತ್ಯಗಾರ್ತಿ ಜಿಯಾ ರವರ ಸಂಗಾತಿಯಾದ ಜಿಹಾದ್ ರವರು ಈಗ 8 ತಿಂಗಳ ಗರ್ಭಿಣಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.* ಮೂರೂ ವರ್ಷದಿಂದ ಸಂಗಾತಿಯಾಗಿರುವ ಅಲ್ಪಸಂಖ್ಯಾತ ದಂಪತಿಗಳು ಪಾವಲ್ ಮತ್ತು ಜಿಹಾದ್ ಇಬ್ಬರು ತಮ್ಮ ಲಿಂಗವನ್ನು ಬದಲಾಯಿಸಿಕೊಳ್ಳಲು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದರು. ಮಗುವನ್ನು ಹೊಂದಬೇಕೆನ್ನುವ ಉದ್ದೇಶದಿಂದ ಚಿಕಿತ್ಸೆಯನ್ನು ನಿಲ್ಲಿಸಿ, ಹೆಣ್ಣಾಗಿದ್ದ ಜಿಹಾದ್ ಪುರುಷನಾಗುವ ಚಿಕಿತ್ಸೆ ಪಡೆಯುತ್ತಿದ್ದರು. ಮಗು ಹೊಂದಬೇಕೆನ್ನುವ ಉದ್ದೇಶದಿಂದ ಅವರು ಹಾರ್ಮೋನ್ ಚಿಕಿತ್ಸೆಯನ್ನು ನಿಲ್ಲಿಸಿದ್ದಾರೆ.