Job Description: * ಸೌರಮಂಡಲದ ಅತಿದೊಡ್ಡ ಗ್ರಹವಾದ ಗುರುವಿನ ಸುತ್ತಲೂ ಇನ್ನೂ 12 ಹೊಸ ಉಪಗ್ರಹಗಳು ಪ್ರದಕ್ಷಿಣೆ ಹಾಕುತ್ತಿರುವುದನ್ನು ಖಗೋಳಶಾಸ್ತ್ರಜ್ಞರು ಪತ್ತೆ ಹಚ್ಚಿಸಿದ್ದಾರೆ. ಇದರಿಂದ ಗುರು ಗ್ರಹದ ಸುತ್ತಲೂ ಇರುವ ಉಪಗ್ರಹಗಳ ಸಂಖ್ಯೆ 91ಕ್ಕೇರಿದೆ. ಉಂಗುರದ ಶನಿಯ ಸುತ್ತ 83 ಉಪಗ್ರಹಗಳು ಸುತ್ತುತ್ತಿವೆ. * ವಾಷಿಂಗ್ಟನ್ ನಲ್ಲಿರುವ ಕಾರ್ನೆಗೀ ಇನ್‌ಸ್ಟಿಟ್ಯೂಷನ್ ಫಾರ್ ಸೈನ್ಸ್ ನ ಖಗೋಳ ಶಾಸ್ತ್ರಜ್ಞ ಸ್ಕಾಟ್ ಶೆಫರ್ಡ್ ನಡೆಸಿದ ಅಧ್ಯಯನದಲ್ಲಿ ಹೊಸ ಉಪಗ್ರಹಗಳು ಪತ್ತೆಯಾಗಿವೆ. ಗುರು ಗ್ರಹವು ಈಗ 91 ಉಪಗ್ರಹಗಳೊಂದಿಗೆ ಮಿನಿ ಸೌರವ್ಯೂಹವಾಗಿದೆ. * ಸುಮಾರು 400 ವರ್ಷಗಳ ಹಿಂದೆ ಗೆಲಿಲಿಯೊ ಗುರು ಗ್ರಹದ ಮೊದಲ ಉಪಗ್ರಹವನ್ನು ಪತ್ತೆ ಹಚ್ಚಿದ್ದರು. ಗುರು ಗ್ರಹವು ತನ್ನ ಕಕ್ಷೆಯೊಳಗೆ ಸುತ್ತುವ ವಿರುದ್ಧ ದಿಕ್ಕಿನಲ್ಲಿ ಇವು ಚಲಿಸುತ್ತಿವೆ ಎಂದು ಸ್ಕಾಟ್ ಶೆಪರ್ಡ್ ಹೇಳಿದ್ದಾರೆ.* 12 ಉಪಗ್ರಹಗಳ ಸೇರ್ಪಡೆಯಿಂದ ಗುರುಗ್ರಹದ ಕುಟುಂಬ ದೊಡ್ಡದಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉಪಗ್ರಹಗಳು ಬೆಳಕಿಗೆ ಬರಬಹುದು. ಹಾಗಾಗಿ ಉಪಗ್ರಹಗಳ ಸಂಖ್ಯೆ 100ರ ಗಡಿ ದಾಟಿದರೂ ಅಚ್ಚರಿಯಿಲ್ಲ ಎಂದು ಖಗೋಳ ಶಾಸ್ತ್ರಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.