Job Description: * ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಸಂಶೋಧಕರು ಬೆಂಗಳೂರಿನ ಹೊರವಲಯದಲ್ಲಿ ಗಾಳಿ ಮತ್ತು ನೀರಿನಲ್ಲಿ ಅಪಾ ಯಕಾರಿ ವಿಕಿರಣಶೀಲ ರೇಡಾನ್ ಇರುವುದನ್ನು ಪತ್ತೆಹಚ್ಚಿದ್ದಾರೆ. * ರೇಡಾನ್ ಎಂಬುದು ಒಂದು ರಾಸಾಯನಿಕ ಅಂಶವಾಗಿದ್ದು, ಇದು ವಿಕಿರಣಶೀಲ, ಬಣ್ಣರಹಿತ, ವಾಸನೆಯಿಲ್ಲದ ಮತ್ತು ರುಚಿಯಿಲ್ಲದ ಅನಿಲವಾಗಿದೆ. ಇದು ವಿಶೇಷವಾಗಿ ಗ್ರಾನೈಟ್ ಗಣಿ ಗಾರಿಕೆ ಹೆಚ್ಚುತ್ತಿರುವುದರಿಂದ ಬರುತ್ತಿದ್ದು, ಗಾಳಿ ಅಥವಾ ನೀರು ಸೇವಿಸಿದಾಗ ರೇಡಾನ್ ಕಣಗಳು ಶಾಸಕೋಶದಲ್ಲಿ ಸಿಕ್ಕಿಹಾಕಿಕೊಳ್ಳ ಬಹುದು.* ದಿನಗಳು ಕಳೆದ ನಂತರ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಗಾಳಿ ಮತ್ತು ನೀರಿನಲ್ಲಿ ರೇಡಾನ್ ಇರುವುದರಿಂದ ಜನರಲ್ಲಿ ಶ್ವಾಸಕೋಶದ ಅಂಗಾಂಶಗಳ ಹಾನಿಗೆ ಕಾರಣವಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಕೂಡ ಬರಬಹುದು.