* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ವಿಜ್ಞಾನಿಗಳು ಅಮೆರಿಕದ ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು  ರಾಮಸೇತುವಿನ ಅತ್ಯಂತ ವಿವರವಾದ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ.* ಶ್ರೀರಾಮನು ಕಾಲದಲ್ಲಿ ನಿರ್ಮಾಣವಾದ ರಾಮ ಸೇತುವೆಯೇ ಇಲ್ಲ ಎನ್ನುವ ಅನೇಕರ ವಾದವಾಗಿದೆ. ದೀರ್ಘಕಾಲದಿಂದ ಇರುವ ವಿವಾದಗಳನ್ನು ಬಗೆಹರಿಸಲು ಈ ನಕ್ಷೆಯಿಂದ ಸಾಧ್ಯವಾಗಲಿದೆ.* 29 ಕೀ.ಮೀ. ಉದ್ದದ ಸೇತುವೆಯ ಸಮುದ್ರದಡಿಯ ನಕ್ಷೆಯನ್ನು ಇದೇ ಮೊದಲ ಬಾರಿಗೆ ಇಷ್ಟೊಂದು ನಿಖರವಾಗಿ ಸಿದ್ದಪಡಿಸಲಾಗಿದೆ. ಅದಲ್ಲದೇ ನಕ್ಷೆಯಲ್ಲಿ ಈ ಸೇತುವೆಯು ಸಮುದ್ರದ ತಳದಿಂದ ಎಂಟು ಮೀ.ನಷ್ಟು ಎತ್ತರದಲ್ಲಿದೆ ತಿಳಿಸಲಾಗಿದೆ.* 'ನಾಸಾದ ಐಸಿ ಇಸ್ಯಾಟ್‌-2 ಉಪಗ್ರಹದ ದತ್ತಾಂಶಗಳನ್ನು ಬಳಸಿಕೊಂಡು ನಕ್ಷೆ ಸಿದ್ಧಪಡಿಸಲಾಗಿದೆ. ರಾಮಸೇತು ಮತ್ತು ಅದರ ಉಗಮದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇದು ನೆರವಾಗಲಿದೆ' ಎಂದು ಇಸ್ರೊದ ನ್ಯಾಷನಲ್‌ ರಿಮೋಟ್‌ ಸೆನ್ಸಿಂಗ್‌ ಸೆಂಟರ್‌ನ ವಿಜ್ಞಾನಿಗಳು ಹೇಳಿದ್ದಾರೆಂದು ವರದಿಯಾಗಿದೆ.* ನಾಸಾದ ಉಪಗ್ರಹವು ಲೇಸರ್‌ ಆಲ್ಟಿಮೀಟರ್‌ ಉಪಕರಣ ಹೊಂದಿದೆ. ಇದು ಸಮುದ್ರದ ಆಳವಿಲ್ಲದ ಪ್ರದೇಶದ ಯಾವುದೇ ರಚನೆಯ ಎತ್ತರವನ್ನು ಅಳೆಯಲು ಸಾಧ್ಯವಾಗುತ್ತದೆ.* ಈ ನಕ್ಷೆಯು ಭಾರತ ಮತ್ತು ಶ್ರೀಲಂಕಾ ವಿವಾದ ಬಗೆಹರಿಸಲು ನೆರವಾಗಲಿದೆ.