* ಒಲಿಂಪಿಕ್ ಅರ್ಹತೆ ಪಡೆದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಜುಲೈ 06 ರಂದು (ಶನಿವಾರ) ನಡೆದ ಸ್ಪೇನ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. * ಪಾನ್ ಅಮೆರಿಕನ್ ಚಾಂಪಿಯನ್ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ವಿರುದ್ಧ 12-4 ಅಂತರದ ಜಯದೊಂದಿಗೆ ಫೋಗಟ್ ಚಿನ್ನದ ಪದಕದತ್ತ ಓಟ ಆರಂಭಿಸಿದರು. ಎರಡು ಬಾರಿ ವಿಶ್ವ ಚಾಂಪಿಯನ್ ಷಿಪ್ ಕಂಚಿನ ಪದಕ ವಿಜೇತೆ ವಿನೇಶ್, ಫೈನಲ್ ನಲ್ಲಿ ಮಾರಿಯಾ ಟಿಯುಮೆರೆಕೊವಾ ಅವರನ್ನು 10-5 ಅಂತರದಿಂದ ಸೋಲಿಸಿ ಅಗ್ರಸ್ಥಾನ ಪಡೆದರು. ವಿನೇಶ್ ಫೋಗಟ್ ಸೆಮಿಫೈನಲ್ ಪಂದ್ಯದಲ್ಲಿ ಕೆನಡಾದ ಕೇಟಿ ಡುಚಾಕ್ ಅವರನ್ನು 9-4 ಅಂಕಗಳಿಂದ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟಿದ್ದರು-. * ಸ್ಪೇನ್ನಲ್ಲಿ ಸ್ಪರ್ಧೆಯ ನಂತರ, ವಿನೇಶ್ ಪ್ಯಾರಿಸ್ ಒಲಿಂಪಿಕ್ಸ್ಗೆ ತಯಾರಿ ನಡೆಸಲು 20 ದಿನಗಳ ತರಬೇತಿಗಾಗಿ ಫ್ರಾನ್ಸ್ಗೆ ತೆರಳಲಿದ್ದಾರೆ.