* ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಜುಲೈ 9 ರಂದು ಖಚಿತಪಡಿಸಿದ್ದಾರೆ.* ರಾಹುಲ್ ದ್ರಾವಿಡ ಅವರ ಅವಧಿಯು ಟಿ20 ವಿಶ್ವಕಪ್ ಗೆಲುವಿನೊಂದಿಗೆ ಮುಕ್ತಾಯಗೊಂಡಿದ್ದು, 42 ವರ್ಷದ ಗೌತಮ್ ಗಂಭೀರ್ ಅವರು ಉತ್ತರಾಧಿಕಾರಿಯಾಗಿ ನೇಮಕವಾಗಿದ್ದಾರೆ.* ಗೌತಮ್ ಗಂಭೀರ್ ಐಪಿಎಲ್ ನಲ್ಲಿ ಕೌಶಲ್ಯಗಳನ್ನು ಮೆರೆದಿದ್ದರು. ಅಲ್ಲದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಲೀಗ್ ಚಾಂಪಿಯನ್ ಕೋಚ್ ಟೀಮ್ ಇಂಡಿಯಾವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ.* ಗಂಭೀರ್ ಅವರ ಅಧಿಕಾರಾವಧಿ 3.5 ವರ್ಷಗಳ ಕಾಲ ಇರಲಿದೆ. ಅಂದರೆ 2027 ಡಿಸೆಂಬರ್ ವರೆಗೂ ಕೋಚ್ ಆಗಿರುತ್ತಾರೆ. 2025ರ ಚಾಂಪಿಯನ್ಸ್ ಟ್ರೋಫಿ, 2025, 2027ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ (ಅರ್ಹತೆ ಪಡೆದರೆ), 2026ರ ತವರಿನ ಟಿ20 ವಿಶ್ವಕಪ್, 2027ರ ಏಕದಿನ ವಿಶ್ವಕಪ್ ಪ್ರಮುಖ ಐಸಿಸಿ ಟೂರ್ನಿಗಳಾಗಿರಲಿವೆ. ಜತೆಗೆ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮಹತ್ವದ ಸವಾಲು ಆಗಿರಲಿವೆ.* ಜುಲೈ 27ರಿಂದ ನಡೆಯಲಿರುವ ಶ್ರೀಲಂಕಾ ಪ್ರವಾಸದ ತಲಾ 3 ಟಿ20 ಮತ್ತು ಏಕದಿನ ಪಂದ್ಯಗಳ ಸರಣಿಯಲ್ಲಿ ಗಂಭೀರ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.