* ವಿಶ್ವ ಕರಕುಶಲ ಮಂಡಳಿಯು ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರವನ್ನು 'ವರ್ಲ್ಡ್ ಕ್ರಾಫ್ಟ್ ಸಿಟಿ' ಎಂದು ಅಧಿಕೃತವಾಗಿ ಗುರುತಿಸಿದೆ.* ಶ್ರೀನಗರವು 'ವಿಶ್ವ ಕರಕುಶಲ ನಗರ' ಎಂಬುದಾಗಿ ಹೆಸರು ಪಡೆದಿರುವುದು ಇಲ್ಲಿನ ಜನರ ಕುಶಲಕರ್ಮಿಗಳ ಗಮನಾರ್ಹ ಕೌಶಲ್ಯಗಳನ್ನು ಮತ್ತು ಕೆಲಸಕ್ಕೆ ಹೇಗೆ ಸಮರ್ಪಿತರಾಗಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಅವರ ಸಾಂಪ್ರದಾಯಿಕ ಕಲೆಗಾರಿಕೆ, ಕೌಶಲ್ಯ, ಸಂಸ್ಕೃತಿಯನ್ನು ಸಿರಿವಂತಗೊಳಿಸಿದೆ. ಈ ಪ್ರಶಸ್ತಿಯು ಶ್ರೀನಗರಕ್ಕೆ ವಿಶಿಷ್ಟವಾದ ವೈವಿಧ್ಯಮಯ ಕರಕುಶಲತೆಯನ್ನು ಗೌರವಿಸಲು ಮತ್ತು ರಕ್ಷಿಸಲು ಕೊಟ್ಟ ಮನ್ನಣೆಯಾಗಿದೆ.* ವಿಶ್ವ ಕರಕುಶಲ ಮಂಡಳಿಯನ್ನು (ಡಬ್ಲ್ಯುಸಿಸಿ) ಲಾಭರಹಿತ ಸಂಸ್ಥೆಯಾಗಿದ್ದು, ಐಲೀನ್ ಅಸ್ಟಾರ್ನ್ ವೆಬ್ ಎಂಬುವರು 1964ರಲ್ಲಿ ಸ್ಥಾಪಿಸಿದ್ದಾರೆ. ಜಗತ್ತಿನಾದ್ಯಂತ ಕರಕುಶಲ ಕಲೆಗಾರಿಕೆಗೆ ಪ್ರೋತ್ಸಾಹ ನೀಡುವುದು ಇದರ ಉದ್ದೇಶವಾಗಿದೆ. ನ್ಯೂಯಾರ್ಕ್ ನಗರದಲ್ಲಿ ವಿದೇಶಿ ಕರಕುಶಲಕರ್ಮಿಗಳ ನಡುವಿನ ಮಾತುಕತೆಗಳ ಫಲವಾಗಿ ಈ ಮಂಡಳಿಯು ಯುನೆಸ್ಕೋಗೆ  ಸೇರಲಾಯಿತು. ಬೆಲ್ಜಿಯಂನಲ್ಲಿ ಇದರ ಕೇಂದ್ರ ಕಚೇರಿಯಿದೆ. * ಡಬ್ಲ್ಯುಸಿಸಿ ಇದುವರೆಗೆ ಜಗತ್ತಿನ ವಿವಿಧ ಭಾಗಗಳ 40ಕ್ಕೂ ಹೆಚ್ಚು ನಗರಗಳನ್ನು 'ಕರಕುಶಲಗಳ ನಗರ' ಎಂದು ಗುರಿತಸಲಾಗಿದೆ.* ಶ್ರೀನಗರವು ವಿಶ್ವ ಕರಕುಶಲ ನಗರ  ಪ್ರಶಸ್ತಿಗೆ ಭಾಜನವಾಗಿರುವುದರಿಂದ ಆರ್ಥಿಕತೆ ಮತ್ತು ವ್ಯಾಪಾರ ವಹಿವಾಟಿನ ಮೇಲೆ ದೊಡ್ಡ ಪರಿಣಾಮವಾಗುವ ಸಾಧ್ಯತೆಯಿದೆ. ಈ ಪ್ರಶಸ್ತಿಯ ಕಾರಣದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ.ಈ ಈ ಪ್ರದೇಶದ ಸಾಂಸ್ಕೃತಿಕ ಅರ್ಥೈಸುವಿಕೆ ಮತ್ತು ವ್ಯಾಪಾರ ಬೆಳವಣಿಗಗಳರೆಡಕ್ಕೂ ಸಹಾಯವಾಗುವ ಸಂಭವವಿದೆ.