* ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಸರಣಿಯು 1-1 ಅಂತರದ ಸಮಬಲದೊಂದಿಗೆ ಅಂತ್ಯಗೊಂಡಿದೆ. * ಸೌತ್ ಆಫ್ರಿಕಾ ತಂಡವು ಕೇವಲ 65 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂಕಷ್ಟದಿಂದ ಪಾರಾಗುವ ಮುನ್ನವೇ 17.1 ಓವರ್ಗಳಲ್ಲಿ 84 ರನ್ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಬೌಲರ್ಗಳು ಯಶಸ್ವಿಯಾದರು.* ಭಾರತದ ಪರ ಪೂಜಾ ವಸ್ತ್ರಾಕರ್ 3.1 ಓವರ್ಗಳಲ್ಲಿ 13 ರನ್ ನೀಡಿ 4 ವಿಕೆಟ್ ಗಳಿಸಿದ್ದು, ರಾಧಾ ಯಾದವ್ 3 ಓವರ್ಗಳಲ್ಲಿ 6 ರನ್ ನೀಡಿ 3 ವಿಕೆಟ್ ಉರುಳಿಸಿ ಮಿಂಚಿದರು.* ದಕ್ಷಿಣ ಆಫ್ರಿಕಾ: 17.1 ಓವರ್‌ಗಳಲ್ಲಿ 84 (ವೋಲ್ಕಾರ್ಡ್ 9, ತಂಜಿಮ್ಸ್ 20, ಮಾರಿಜಾನ್ನ 10, ಅನ್ನಕೆ 17. ಪ್ರಿಯೋನ್ 9, ಸಿನಾಲೊ 8. ಪೂಜಾ 13ಕ್ಕೆ 4. ರಾಧಾ 6ಕ್ಕೆ 3. ಶ್ರೇಯಾಂಕಾ 19ಕ್ಕೆ 1) * ಭಾರತ: 10.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 88 (ಶೆಫಾಲಿ 27*, ಸ್ಮತಿ 54*) ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ: ಪೂಜಾ ಪೂಜಾ ವಸ್ತ್ರಾಕರ್* ಭಾರತ ಪ್ಲೇಯಿಂಗ್ 11: ಶಫಾಲಿ ವರ್ಮಾ , ಸ್ಮೃತಿ ಮಂಧಾನ , ಜೆಮಿಮಾ ರೊಡ್ರಿಗಸ್ , ಹರ್ಮನ್‌ಪ್ರೀತ್ ಕೌರ್ (ನಾಯಕಿ) , ದೀಪ್ತಿ ಶರ್ಮಾ , ಉಮಾ ಚೆಟ್ರಿ (ವಿಕೆಟ್ ಕೀಪರ್) , ಎಸ್ ಸಜನಾ , ಪೂಜಾ ವಸ್ತ್ರಾಕರ್ , ಶ್ರೇಯಾಂಕಾ ಪಾಟೀಲ್ , ಅರುಂಧತಿ ರೆಡ್ಡಿ , ರಾಧಾ ಯಾದವ್.* ಸೌತ್ ಆಫ್ರಿಕಾ ಪ್ಲೇಯಿಂಗ್ 11: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್ಮಿನ್ ಬ್ರಿಟ್ಸ್, ಡೆಲ್ಮಿ ಟಕರ್, ಸುನೆ ಲೂಸ್, ಮರಿಝನ್ನೆ ಕಪ್, ನಾಡಿನ್ ಡಿ ಕ್ಲರ್ಕ್, ಎಲಿಜ್-ಮಾರಿ ಮಾರ್ಕ್ಸ್, ಸಿನಾಲೊ ಜಾಫ್ತಾ (ವಿಕೆಟ್ ಕೀಪರ್), ಅಯಾಬೊಂಗಾ ಖಾಕಾ, ನಾನ್ಕುಲುಲೆಕೊ ಮ್ಲಾಬಾ, ಅನ್ನೆಕೆ ಬಾಷ್,* ಪೂಜಾ ವಸಕರ್ ಟಿ20ನಲ್ಲಿ 50 ವಿಕೆಟ್ ಪಡೆದ 2ನೇ ಭಾರತೀಯ ಬೌಲರ್ ಆಗಿದ್ದು, ಜೂಲನ್ ಗೋಸ್ವಾಮಿ ಅವರು ಮೊದಲನೇ ಬೌಲರ್ ಆಗಿದ್ದಾರೆ.