Job Description: * ಅಳಿವಿನಂಚಿನಲ್ಲಿರುವ 'ಗ್ರೇಟ್ ಇಂಡಿಯನ್ ಬಾಸ್ಟರ್ಡ್' ಹಕ್ಕಿಗಳು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನಲ್ಲಿ ಕಾಣಿಸಿಕೊಂಡಿವೆ. ಅವುಗಳ ಸಂರಕ್ಷಣೆಗೆ 'ಆವಾಸ' ವಿಸ್ತರಿಸಿ, ಅವುಗಳ ಮೊಟ್ಟೆಗಳನ್ನು ಸಂಗ್ರಹಿಸಿ ಕೃತಕವಾಗಿ ಮರಿ ಮಾಡಿಸಿ ಪರಿಸರಕ್ಕೆ ಬಿಡಲು 'ಕಾವು ಕೇಂದ್ರ' ಸ್ಥಾಪಿಸುವದಕ್ಕೆ ಅರಣ್ಯ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. * ಹುಲಿ ಸಂರಕ್ಷಣಾ ಯೋಜನೆ ಮಾದರಿಯಲ್ಲೇ 'ಗ್ರೇಟ್ ಇಂಡಿಯನ್ ಬಾಸ್ಟರ್ಡ್' ಹಕ್ಕಿಗಳ ಸಂರಕ್ಷಣೆಗೂ ಸಿದ್ಧಪಡಿಸಲಾಗುತ್ತದೆ. ಸಮೀಕ್ಷಾ ವರದಿಯ ಪ್ರಕಾರ ಸಿರಗುಪ್ಪ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಈ ಪಕ್ಷಿಗಳು ಕಾಣಿಸಿವೆ. ರಾಜಸ್ಥಾನ, ಗುಜರಾತ್, ಆಂಧ್ರ, ಕರ್ನಾಟಕ ಸೇರಿ 'ಗ್ರೇಟ್ ಇಂಡಿಯನ್ ಬಾಸ್ಟರ್ಡ್' ಹಕ್ಕಿಗಳು 150 ಇರಬಹುದು ಮತ್ತು ಶಿರಗುಪ್ಪದಲ್ಲಿ 5 - 6 ಹಕ್ಕಿಗಳು ಇರಬಹುದು ಎಂದು ಮಾಹಿತಿ ನೀಡಿದೆ.