Job Description: * ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳಕಾವಲ್‌ನಲ್ಲಿ 6300 ಕೋಟಿ ರೂ. ಬಂಡವಾಳದಲ್ಲಿ ಆರಂಭವಾಗಲಿರುವ ಬಹುನಿರೀಕ್ಷಿತ ಕೇಂದ್ರ ಸರ್ಕಾರದ ಎಚ್‌ಎಎಲ್ ಲಘುಹೆಲಿಕ್ಯಾಪ್ಟರ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 6 ರಂದು ಲೋಕಾರ್ಪಣೆ ಮಾಡಿದ್ದಾರೆ. * 6400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಹೆಚ್ ಎಎಲ್ ಉತ್ಪಾದನಾ ಘಟಕದಲ್ಲಿ, 3 ಸಾವಿರ ಕೆಜಿ ತೂಕ ಲೈಟ್ ಯುಟಿಲಿಟಿ ಸಾಮರ್ಥ್ಯವುಳ್ಳ ಹೆಲಿಕಾಪ್ಟರ್ ಉತ್ಪಾದನೆ ಮಾಡಲಾಗುತ್ತಿದೆ. ಈ ಹೆಲಿಕಾಪ್ಟರ್ ನಲ್ಲಿ 5-6 ಜನ ಪ್ರಯಾಣ ಮಾಡಬಹುದಾಗಿದೆ. 614 ಎಕರೆಯಲ್ಲಿ, 529 ಎಕರೆ ಜಾಗದಲ್ಲಿ ಹೆಲಿಕಾಪ್ಟರ್ ಬಿಡಿ ಭಾಗ ತಯಾರಿಸುವ ಜೋಡಿಸುವ ಘಟಕ, ರನ್ ವೇ, ಆಸ್ಪತ್ರೆ, ಆಢಳಿತ ಕಚೇರಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಿದ್ದವಾಗುವ ಹೆಲಿಕಾಪ್ಟರ್ ಗಳನ್ನು ಭೂ ಸೇನೆ ವಾಯು ಸೇನೆಗೆ ಬಳಕೆ ಮಾಡಲಾಗುವದು.* ಸೇನೆ ಮತ್ತು ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಶೇಕಡಾ 90 ರಷ್ಟು ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು, ಅದನ್ನು ಈಗ ಶೇಕಡಾ 60 ರಷ್ಟಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರಮಾಣದ ಮತ್ತಷ್ಟು ಕಡಿಮೆ ಮಾಡಲಾಗುವದು, ದೇಶದ ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯನ್ನಾಗಿಡುವದು ನಮ್ಮ ಗುರಿ ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ.