Job Description: * ಟರ್ಕಿ ದೇಶದ ಆಗ್ನೇಯ ಭಾಗದ ನೆರೆಯ ಸಿರಿಯಾದ ಉತ್ತರ ಭಾಗದಲ್ಲಿ ಫೆ.06 ರಂದು ನಸುಕಿನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದಿಂದ 2300 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. 9 ಸಾವಿರಕ್ಕೂ ಹೆಚ್ಚು ಜನರು ಗಾಯಕೊಂಡಿದ್ದಾರೆ. ಸಾವಿರಾರು ಕಟ್ಟಡಗಳು, ಮನೆಗಳು ನೆಲಸಮವಾಗಿವೆ. * ಟರ್ಕಿಯ ಆಗ್ನೇಯ ಪ್ರಾಂತ್ಯದ ಗಾಝಿಯಾನ್ ಟೆಪ್ ಪಟ್ಟಣದ ಉತ್ತರಕ್ಕೆ 18 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದುವಾಗಿದೆ. ಸಿರಿಯಾದಲ್ಲಿ ಎರಡು ದಶಕಗಳ ಅಂತರ್ ಯುದ್ಧದ ಪರಿಣಾಮ ಗಡಿಯ ಎರಡೂ ಬದಿಗಳಲ್ಲಿ ನೆಲೆಕಂಡುಕೊಂಡಿದ್ದ ವಲಸಿಗರ ಜನವಸತಿ ಪ್ರದೇಶಗಳು ಕಂಪನದ ಪರಿಣಾಮದಿಂದ ಈ ರೀತಿಯಾಗಿ ನೆಲಸಮವಾಗಿವೆ.* ಸಿರಿಯಾದ ಅಲೆಪ್ಪೊ ಮತ್ತು ಹಮಾದ್ ನಗರಗಳಿಂದ ಹಿಡಿದು ಟರ್ಕಿಯ ದೀಯೆರ್ ಬಕೀರ್ ವರೆಗೆ ಈಶಾನ್ಯಕ್ಕೆ 330 ಕಿ.ಮೀ ಗಿಂತಲೂ ಹೆಚ್ಚು ವಿಸ್ತಾರದ ಪ್ರದೇಶದಲ್ಲಿ ಕಟ್ಟಡಗಳು ಕುಸಿದಿವೆ.