Job Description: * ಖ್ಯಾತ ಚಿತ್ರ ಕಲಾವಿದ 74 ವರ್ಷದ ಬಿ.ಕೆ.ಎಸ್.ವರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ. 1986ರಲ್ಲಿ ವರ್ಮಾ ಅವರ ಮೊದಲ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ನಡೆದಿತ್ತು. ರವಿವರ್ಮನ ಕಲಾಕೃತಿಗಳಿಂದ ಪ್ರೇರಣೆ ಪಡೆದಿದ್ದ ಅವರು ತೈಲವರ್ಣದಲ್ಲಿ ಚಿತ್ರ ಬಿಡಿಸುತ್ತಿದ್ದರು. ಕನ್ನಡ ತಾಯಿ ಭುವನೇಶ್ವರಿ, ಭಾರತಮಾತೆ, ಪೂಜೆಯಲ್ಲಿ ಮೈಮರೆತ ರಾಘವೇಂದ್ರ ಸ್ವಾಮಿ, ಈಶ್ವರ ಕುಟುಂಬ ಕಲಾಕೃತಿಗಳು ವಿಶ್ವಮಟ್ಟದಲ್ಲಿ ಜನಪ್ರಿಯವಾಗಿದ್ದವು. ಮನೆಮನೆಗಳಲ್ಲೂ ಪೂಜೆಗೊಳ್ಳುತ್ತಿದ್ದವು.* ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ರಾಜಾ ರವಿವರ್ಮಾ ರವರ ಪೇಂಟಿಂಗ್ ಗಳನ್ನು ವೀಕ್ಷಿಸುತ್ತಿದ್ದಿದ್ದಾಗ ತನ್ಮಯರಾಗಿ ವರ್ಮಾ ಎಂಬ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡನಂತರ ಅವರ ಜೀವನದ ದಿಶೆಯೇ ಬದಲಾಯಿತಂತೆ.* ಕನ್ನಡ ಸಾಹಿತ್ಯ ಪರಿಸತ್ತು ಸೇರಿದಂತೆ, ಕರ್ನಾಟಕ ದಿನಾಚರಣೆಗಳಲ್ಲಿ , ಕನ್ನಡ ಬಾವುಟದಲ್ಲಿ ಅತ್ಯಂತ ಹೆಮ್ಮೆಯಿಂದ ಬಳಸುವ ತಾಯಿ ಭುವನೇಶ್ವರಿ ದೇವಿಯ ಚಿತ್ರ ವರ್ಮಾ ಅವರ ಮಹತ್ತರ ಕೊಡುಗೆಯಾಗಿದೆ.* ಬಿ.ಕೆ.ಎಸ್ ವರ್ಮಾ ಅವರು ಅತ್ತಿಬೆಲೆ ತಾಲೂಕಿನ ಕರ್ನೂರಿನಲ್ಲಿ 1949 ರಲ್ಲಿ ಜನಿಸಿದ್ದರು. ಬೆಂಗಳೂರು ವಿವಿ 2011 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಪರಿಸರ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿತ್ರ ಬರೆಯುತ್ತಿದ್ದ ಅವರು, ಎಲ್ಲರ ಗಮನಸೆಳೆದಿದ್ದರು. ತಮ್ಮ 6 ನೇ ವಯಸ್ಸಿಗೆ ರೇಖಾಚಿತ್ರ ಪ್ರಾರಂಭಿಸಿದ್ದರು.