* ಕುರುಡುತನ, ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅದರ ಸೂಕ್ತ ಚಿಕಿತ್ಸೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 12 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.  * 2023ರ ವಿಶ್ವ ದೃಷ್ಟಿ ದಿನದ ಥೀಮ್ ಕೆಲಸದಲ್ಲಿ ನಿಮ್ಮ ಕಣ್ಣುಗಳನ್ನು ಪ್ರೀತಿಸಿ (Love Your Eyes At Work) ಎಂಬುವುದಾಗಿದೆ.* ಇದನ್ನು ಮೊದಲು 2000 ರಲ್ಲಿ ಲಯನ್ ಕ್ಲಬ್ ಇಂಟರ್ನ್ಯಾಷನಲ್ ಫೌಂಡೇಶನ್ ಸೈಟ್ ಫಸ್ಟ್ ಅಭಿಯಾನದ ಅಡಿಯಲ್ಲಿ ಜರಿತರಲಾಯಿತು. ಕುರುಡುತನ, ದೃಷ್ಟಿ ದೋಷ ಮತ್ತು ಕಣ್ಣಿನ ಆರೋಗ್ಯ ಉಪಕ್ರಮಗಳ ಬಗ್ಗೆ ಜಾಗೃತಿ ಮತ್ತು ಗಮನವನ್ನು ತರುವುದು ದಿನದ ಮುಖ್ಯ ಗುರಿಯಾಗಿದೆ.*