* ಈಶಾನ್ಯ ರಾಜ್ಯದ ದಕ್ಷಿಣ ಹೋನಕ್ ಸರೋವರವನ್ನು ಉಪಗ್ರಹಗಳ ಮೂಲಕ ನಿಗಾ ಇಡುವುದು ಮ ಯಾವುದೇ ಅಸಹಜ ಬದಲಾವಣೆಗಳ ಬಗ್ಗೆ ಅಧಿಕಾರಿಗಳಿಗೆ ಮುನ್ಸೂಚನೆ ನೀಡುವಂತೆ ಇಸ್ರೋಗೆ ಮನವಿ ಮಾಡಲಾಗಿದೆ.* ಸಿಕ್ಕಿಂ ಮೂಲತಃ ನೇಪಾಳ ಮತ್ತು ಭೂತಾನ್ ನಡುವೆ ಸುತ್ತುವರಿದ ಪರ್ವತಗಳ ರಾಜ್ಯವಾಗಿದೆ. ಕಳೆದ ವಾರ ಉತ್ತರ - ಸಿಕ್ಕಿಂನ ಹೋನಕ್ ಸರೋವರದ ಮೇಲೆ ಮೇಘಸ್ಫೋಟದಿಂದ ತೀಸ್ತಾನದಿ ಜಲಾನಯನ ಪ್ರದೇಶದಲ್ಲಿ ಹಠಾತ್ ಪ್ರವಾಹ ಉಂಟಾಗಿ ಸೇನಾ ಸಿಬ್ಬಂದಿ ಸೇರಿದಂತೆ 82 ಮಂದಿ ಮೃತಪಟ್ಟಿದ್ದಾರೆ.* ಚುಂಗ್‌ತಾಂಗ್‌, ಲಾಚುಂಗ್‌ ಮತ್ತು ಲಾಚೆನ್‌ನಲ್ಲಿ 3,000ಕ್ಕೂ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನು ವಾಯುಪಡೆ ಹೆಲಿಕಾಪ್ಟರ್‌ಗಳ ಮೂಲಕ ಏರ್ ಲಿಫ್ಟ್ ಮಾಡಲಾಗುತ್ತಿದೆ.