Job Description: * ಭಾರತದ ರಾಜಧಾನಿ ದೆಹಲಿಯಲ್ಲಿ ಗುರುವಾರ ಜನೆವರಿ 26 ರಂದು 74 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ನಾರೀಶಕ್ತಿ ಥೀಮ್ ನ ಅಡಿ ಕರ್ತವ್ಯಪಥದಲ್ಲಿ ನಡೆದ ಕಾರ್ಯಕ್ರಮವು ಹಲವಾರು ಪ್ರಥಮಗಳಿಗೆ ಮತ್ತು ಹೊಸತುಗಳಿಗೆ ಸಾಕ್ಷಿಯಾಯಿತು. * ಪಥಸಂಚಲನದಲ್ಲಿ ಆತ್ಮನಿರ್ಭರ ಭಾರತ ಅಭಿಯಾನದಡಿ ಸ್ವದೇಶಿಯಾಗಿ ನಿರ್ಮಿಸಿದ ಶಸ್ತ್ರಾಸ್ತ್ರಗಳು, ರಾಜ್ಯದ ನಾರೀಶಕ್ತಿ ಸೇರಿದಂತೆ ವಿವಿಧ ರಾಜ್ಯಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ದಚಿತ್ರಗಳು, ದೇಶದ ಮಿಲಿಟರಿ ಶಕ್ತಿ ಅನಾವರಣಗೊಂಡಿತು. * ದೇಶದ ಸಂಸ್ಕೃತಿ ಮತ್ತು ಪರಂಪರೆ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ಬಿಂಬಿಸುವ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ವಿವಿಧ ಸಚಿವಾಲಯದ 6 ಸ್ತಬ್ದಚಿತ್ರಗಳು ಪ್ರದರ್ಶನಗೊಂಡವು. ಕರ್ನಾಟಕ ಸರ್ಕಾರ ಸೂಲಗಿತ್ತಿ ನರಸಮ್ಮ, ವೃಕ್ಷಮಾತೆ ತುಳಸಿಗೌಡ ಮತ್ತು ಸಾಲುಮರದ ತಿಮ್ಮಕ್ಕ ಇವರುಗಳ ಸಾಧನೆಯನ್ನು 'ನಾರೀಶಕ್ತಿ' ಥೀಮ್ ಸ್ತಬ್ದಚಿತ್ರ ಎಲ್ಲರ ಗಮನ ಸೆಳೆಯುವಂತೆ ಮಾಡಿತು. * ವಿಂಟೇಜ್ ಏರ್ ಕ್ರಾಫ್ಟ್ ಸೇರಿದಂತೆ 50 ವಿಮಾನಗಳು ಮತ್ತು ಹೆಲಿಕ್ಯಾಪ್ಟರ್ ಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮೂರೂ ಮಿಗ್ - 29, ಎರಡು ಅಪಾಚೆ ಹೆಲಿಕ್ಯಾಪ್ಟರ್, ಐದು ಸಾರಂಗ ವಿಮಾನಗಳು ಆಕಾಶದಲ್ಲಿ ತ್ರಿವರ್ಣ ಧ್ವಜ ರಚಿಸಿದವು. * ನೌಕಾಪಡೆಯ 114 ಯುವ ನಾವಿಕರನ್ನು ಒಳಗೊಂಡ ತಂಡವನ್ನು ಕನ್ನಡತಿ ಲೆಫ್ಟಿನೆಂಟ್ ಸಿಡಿಆರ್. ದಿಶಾ ಅಮೃತ್ ಮುನ್ನೆಡಿಸಿದರು. ಈ ತಂಡವು ಇದೆ ಮೊದಲ ಬಾರಿಗೆ 3 ಮಹಿಳಾ ಮತ್ತು 6 ಪುರುಷ ಅಗ್ನಿವೀರರನ್ನು ಒಳಗೊಂಡಿದೆ. ಚೇತನ್ ಶರ್ಮ ಅವರು ಆಕಾಶ್ ಕ್ಷಿಪಣಿ ವ್ಯವಸ್ಥೆಯ ಪ್ರದರ್ಶನದ ವೇಳೆಯ ಟ್ಯಾಂಕ್ ಒಂದರ ಮುಂದಾಳತ್ವ ವಹಿಸಿದ್ದರು. * ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸೈನಿಕರು ಶಿಸ್ತಿನ ಪಥಸಂಚಲನ ನಡೆಸಿ, ಸೇನಾಶಕ್ತಿಯನ್ನು ಪ್ರದರ್ಶಿಸಿದರು. ಎನ್ ಸಿಸಿ ಯಾ ಪುರುಷ ಮತ್ತು ಮಹಿಳಾ ಪಡೆಗಳು ಪಥಸಂಚಲನದಲ್ಲಿ ಭಾಗಿಯಾಗಿದ್ದವು, * ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶಿಷ್ಟ ಉಡುಗೆ ಕಪ್ಪು ಕೋಟ್, ಬಿಳಿ ಪ್ಯಾಂಟ್, ರಾಜಸ್ಥಾನಿ ಪೇಟ ಧರಿಸಿ ಈ ಬಾರಿಯ ಗಣರಾಜ್ಯೋತ್ಸವ ಆಚರಿಸಿದರು. ನರೇಂದ್ರ ಮೋದಿ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಜನತೆಗೆ ಶುಭ ಹಾರೈಸಿದರು. ನಾವೆಲ್ಲರೂ ಮುನ್ನಡೆಯಬೇಕೆಂದು ಸ್ವಾತಂತ್ರ್ಯದ ಹೋರಾಟಗಾರರ ಕನಸು ನನಸು ಮಾಡೋಣ ಎಂದು ಹೇಳಿದರು. * ಈ ಬಾರಿಯ ಸೆಂಟ್ರಲ್ ವಿಸ್ಟಾ, ಕರ್ತವ್ಯ ಪಥದ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರು, ಹಾಲು - ತರಕಾರಿ ಮಾರಾಟಗಾರರು, ಬೀದಿ ಬದಿಯ ವ್ಯಾಪಾರಿಗಳು ಎಲ್ಲರೂ ಗ್ಯಾಲರಿಯ ಪ್ರಮುಖ ಜಾಗದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. * ಈ ಬಾರಿಯ ರಾಜ್ಯೋತ್ಸವದಲ್ಲಿ ಇಸ್ರೇಲ್ ವಿದೇಶಾಂಗ ಸಚಿವ ಡಿಜಟಲ್ ಡಿಪ್ಲೊಮಸಿ ಬ್ಯುರೋ ಡಾ ಮುಖ್ಯಸ್ಥ ಡೇವಿಡ್ ಸರಂಗಾ ರವರು ಪಾಲ್ಗೊಂಡಿದ್ದರು.