Job Description: * ಕರ್ನಾಟಕ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ 2022 ರ ಪ್ರಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ ಆದರೆ, ಬಡತನ ಹಾಗೂ ಅಪೌಷ್ಠಿಕತೆಯ ಸಮಸ್ಯೆಗಳು ಹೆಚ್ಚಾಗಿ ಬೆಳೆಯುತ್ತಿವೆ ಎಂದು ವರದಿ ಹೇಳುತ್ತದೆ.* ಕರ್ನಾಟಕದಲ್ಲಿ ಹತ್ತು ಜಿಲ್ಲೆಗಳು ಬಹು ಆಯಾಮದ ಬಡತನ ಸೂಚ್ಯಂಕದ ವಿಷಯದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿವೆ, ಕೆಲವು ಜಿಲ್ಲೆಗಳು ಮಾನವ ಅಭಿವೃದ್ಧಿಯಲ್ಲಿ ಪ್ರಗತಿ ಸಾಧಿಸಿದ್ದರೂ, ಬಡತನದಲ್ಲಿ ಸಾಧಿಸಿಲ್ಲ ಎಂಬ ಅಂಶ ವರದಿಯಲ್ಲಿದೆ.* 1990 ರಿಂದ 2019 ರ ವರೆಗೆ ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವು 1.9 ರ ಬೆಳವಣಿಗೆಯೊಂದಿಗೆ 0.429 ರಿಂದ 0.645 ರಷ್ಟಕ್ಕೆ ಏರಿಕೆಯಾಗಿದೆ. ಪ್ರಸ್ತುತ ಮಾನವ ಅಭಿವೃದ್ಧಿ ಸೂಚ್ಯಂಕವು 45.9 ರಷ್ಟಿದೆ.