ಬಾಗಲಕೋಟೆ ಜಿಲ್ಲೆಯ ದಿ ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ 2025 | SSLC / PUC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ 2025 ರ ಮೂಲಕ 45 ಹುದ್ದೆಗಳಿಗೆ SSLC PUC ಪಾಸ್ ಬ್ಯಾಂಕ್ ಜಾಬ್ ಅವಕಾಶ ಸಿಕ್ಕಿದೆ! ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಕನಸು ಕಾಣುವ ಎಲ್ಲಾ ಯುವಕ-ಯುವತಿಯರಿಗೆ ಇದು ಒಂದು ಬಾಗಲಕೋಟೆ ಬ್ಯಾಂಕ್ ನೌಕರಿ ಅವಕಾಶ.
ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ 2025 ರ ಈ ಪ್ರಕ್ರಿಯೆಯಲ್ಲಿ ಕನಿಷ್ಠ SSLC ಅಥವಾ PUC ಪಾಸಾದ ಅಭ್ಯರ್ಥಿಗಳು ಭಾಗವಹಿಸಬಹುದು. ಜಮಖಂಡಿ ಬ್ಯಾಂಕ್ ನ ವಿವಿಧ ಪೋಸ್ಟ್‌ಗಳಿಗೆ ಲಭ್ಯವಿದೆ ಮತ್ತು ಇದು ಕರ್ನಾಟಕ ಬ್ಯಾಂಕ್ ನೌಕರಿ ಹುಡುಕುವವರಿಗೆ ಉತ್ತಮ.
ಈ ಲೇಖನದಲ್ಲಿ ನೀವು ತಿಳಿಯಬೇಕಾದ ಎಲ್ಲ ಮುಖ್ಯ ಮಾಹಿತಿಗಳು ಸಿಗುತ್ತವೆ. ಬ್ಯಾಂಕ್ ಅರ್ಜಿ ಸಲ್ಲಿಸುವ ವಿಧಾನ ಮತ್ತು ಹಂತ ಹಂತವಾಗಿ ಅಪ್ಲಿಕೇಶನ್ ಪ್ರಕ್ರಿಯೆ, ಸಿಲೆಕ್ಷನ್ ಪ್ರಕ್ರಿಯೆ ಮತ್ತು ಜಮಖಂಡಿ ಬ್ಯಾಂಕ್ ಸಂಬಳ ವಿವರ ಸೇರಿದಂತೆ ಸಂಪೂರ್ಣ ಮಾರ್ಗದರ್ಶನ ಸಿಗುತ್ತದೆ. ತನ್ನ ಹೊಸ ಪ್ರಧಾನ ಕಛೇರಿಗಾಗಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಒಟ್ಟು 45 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ : ಕೇವಲ ಆನ್‌ಲೈನ್ (ಖುದ್ದಾಗಿ/ಅಂಚೆ/ಕೂರಿಯರ್ ಮೂಲಕ ಅರ್ಜಿ ಸ್ವೀಕರಿಸಲಾಗುವುದಿಲ್ಲ)
ಈ ನೇಮಕಾತಿ ಅವಕಾಶ SSLC ಮತ್ತು PUC ಪಾಸಾದ ಅಭ್ಯರ್ಥಿಗಳಿಗೆ ಒಂದು ಚಿನ್ನದ ಅವಕಾಶ. ಹುದ್ದೆಗಳು, ಸರಳ ಅರ್ಹತೆಗಳು, ಮತ್ತು ಉತ್ತಮ ಸಂಬಳದ ಪ್ಯಾಕೇಜ್‌ನೊಂದಿಗೆ ಈ ಅವಕಾಶ ಯುವಕರಿಗೆ ಉದ್ಯೋಗದ ಸ್ಥಿರ ಭವಿಷ್ಯವನ್ನು ನೀಡುತ್ತದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸು ಕಾಣುವವರಿಗೆ ಇದು ಪರಿಪೂರ್ಣ ಪ್ರವೇಶದ್ವಾರ.
ಹುದ್ದೆಗಳ ವಿವರಗಳು:
1. ಕಿರಿಯ ಸಹಾಯಕರು : 14
2. ಗಣಕಯಂತ್ರ ನಿರ್ವಾಹಕರು : 04
3. ಸಿಪಾಯಿ : 16
4. ರಾತ್ರಿ ಕಾವಲುಗಾರರು : 08
5. ವಾಹನ ಚಾಲಕರು : 02
6. ಗನ್ ಮ್ಯಾನ್ : 01
ವೇತನ ಶ್ರೇಣಿ :
1. ಕಿರಿಯ ಸಹಾಯಕರು : ₹33,450 – ₹62,600
2. ಗಣಕಯಂತ್ರ ನಿರ್ವಾಹಕರು : ₹33,450 – ₹62,600
3. ಸಿಪಾಯಿ : ₹21,400 – ₹42,000
4. ರಾತ್ರಿ ಕಾವಲುಗಾರರು : ₹21,400 – ₹42,000
5. ವಾಹನ ಚಾಲಕರು : ₹21,400 – ₹42,000
6. ಗನ್ ಮ್ಯಾನ್ : ₹21,400 – ₹42,000
ಶೈಕ್ಷಣಿಕ ಅರ್ಹತೆಗಳು :
- ಕಿರಿಯ ಸಹಾಯಕರು: ದ್ವಿತೀಯ ಪಿಯುಸಿ ಪಾಸ್ + ಕನ್ನಡ ಜ್ಞಾನ + ಕಂಪ್ಯೂಟರ್ ಆಪರೇಷನ್ಸ್ ಜ್ಞಾನ. (ಪದವಿ ಹೊಂದಿದವರಿಗೆ ಆದ್ಯತೆ)
- ಗಣಕಯಂತ್ರ ನಿರ್ವಾಹಕರು: ಪಿಯುಸಿ ಅಥವಾ ಕಮರ್ಶಿಯಲ್ ಪ್ರಾಕ್ಟೀಸ್ ಡಿಪ್ಲೊಮಾ + ಟೈಪ್ ರೈಟಿಂಗ್/ಕಂಪ್ಯೂಟರ್ ಜ್ಞಾನ. (ಬಿಇ – ಕಂಪ್ಯೂಟರ್ ಸೈನ್ಸ್/ಐಟಿ ಅಭ್ಯರ್ಥಿಗಳಿಗೆ ಆದ್ಯತೆ)
- ಸಿಪಾಯಿ/ರಾತ್ರಿ ಕಾವಲುಗಾರರು: ಎಸ್‌ಎಸ್‌ಎಲ್‌ಸಿ ಪಾಸ್ + ಕನ್ನಡ ಜ್ಞಾನ. (ಮಾಜಿ ಸೈನಿಕರಿಗೆ ಆದ್ಯತೆ)
- ವಾಹನ ಚಾಲಕರು: ಎಸ್‌ಎಸ್‌ಎಲ್‌ಸಿ ಪಾಸ್ + ಲಘು ಮತ್ತು ಭಾರಿ ವಾಹನ ಪರವಾನಿಗೆ + 5 ವರ್ಷಗಳ ಅನುಭವ.
- ಗನ್ ಮ್ಯಾನ್: ಎಸ್‌ಎಸ್‌ಎಲ್‌ಸಿ ಪಾಸ್ + ಮಾಜಿ ಸೈನಿಕರಿಗೆ ಆದ್ಯತೆ.
ವಯೋಮಿತಿ (ಅರ್ಜಿಯ ಕೊನೆಯ ದಿನಾಂಕಕ್ಕೆ):
- ಸಾಮಾನ್ಯ ವರ್ಗ: 35 ವರ್ಷ
- ಇತರೆ ಹಿಂದುಳಿದ ವರ್ಗ (2A, 2B, 3A, 3B): 38 ವರ್ಷ
- ಪರಿಶಿಷ್ಟ ಜಾತಿ/ಪಂಗಡ/ಪ್ರವರ್ಗ-1: 40 ವರ್ಷ
- ಮಾಜಿ ಸೈನಿಕರು: 45 ವರ್ಷ
ಅರ್ಜಿ ಶುಲ್ಕ:
- ಕಿರಿಯ ಸಹಾಯಕರು ಮತ್ತು ಗಣಕಯಂತ್ರ ನಿರ್ವಾಹಕರು:
- ಸಾಮಾನ್ಯ/OBC: ₹2,000 + GST 18%
- SC/ST/ಪ್ರವರ್ಗ-1: ₹1,000 + GST 18%
- ಸಿಪಾಯಿ, ಕಾವಲುಗಾರ, ಚಾಲಕ, ಗನ್ ಮ್ಯಾನ್: ಅಧಿಸೂಚನೆಯಲ್ಲಿ ವಿವರ ಲಭ್ಯ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಕಿರಿಯ ಸಹಾಯಕರು/ಗಣಕಯಂತ್ರ ನಿರ್ವಾಹಕರು – 200 ಅಂಕಗಳು
- ಇತರೆ ಹುದ್ದೆಗಳು – 100 ಅಂಕಗಳು
- ಪ್ರಾಯೋಗಿಕ ಪರೀಕ್ಷೆ (ಕಂಪ್ಯೂಟರ್/ಚಾಲನೆ)
- ಸಂದರ್ಶನ
- ಅಂತಿಮ ಆಯ್ಕೆ: ಲಿಖಿತ ಪರೀಕ್ಷೆಯ ಅಂಕಗಳು (85%) + ಸಂದರ್ಶನದ ಅಂಕಗಳು (15%).
ಪ್ರಮುಖ ಸೂಚನೆಗಳು:
- ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
- ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ.
- ಲಿಂಕ್ ಮತ್ತು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ನೋಡಿ:
www.thejamkhandiurbanbank.com
ಪ್ರಮುಖ ದಿನಾಂಕಗಳು :
📌ಅರ್ಜಿ ಸಲ್ಲಿಕೆ ಪ್ರಾರಂಭ: 28/08/2025
📌 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27/09/2025 ಸಂಜೆ 5.00 ಗಂಟೆವರೆಗೆ
📌 ಪರೀಕ್ಷಾ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು
📌ಅಧಿಕೃತ ವೆಬ್‌ಸೈಟ್: www.thejamkhandiurbanbank.com
Comments