Loading..!

ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO) ಇಲ್ಲಿ ಖಾಲಿ ಇರುವ 182 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Basavaraj Halli | Date:21 ಫೆಬ್ರುವರಿ 2020
not found
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಒಟ್ಟು 182 ಟೆಕ್ನೀಶಿಯನ್, ಅಸಿಸ್ಟೆಂಟ್ ಮತ್ತು ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 6 ಕೊನೆಯ ದಿನವಾಗಿರುತ್ತದೆ.

ಹುದ್ದೆಗಳ ವಿವರ :
* ಟೆಕ್ನೀಶಿಯನ್ : 99 ಹುದ್ದೆಗಳು
* ಡ್ರಾಫ್ಟ್ಸ್‌ಮೆನ್ : 3 ಹುದ್ದೆಗಳು
* ಟೆಕ್ನಿಕಲ್ ಅಸಿಸ್ಟೆಂಟ್ : 41 ಹುದ್ದೆಗಳು
* ಲೈಬ್ರರಿ ಅಸಿಸ್ಟೆಂಟ್ : 4 ಹುದ್ದೆಗಳು
* ಸೈಂಟಿಫಿಕ್ ಅಸಿಸ್ಟೆಂಟ್ : 7 ಹುದ್ದೆಗಳು
* ಹಿಂದಿ ಟೈಪಿಸ್ಟ್ : 2 ಹುದ್ದೆಗಳು
* ಕ್ಯಾಟರಿಂಗ್ ಅಟೆಂಡೆಂಟ್ : 5 ಹುದ್ದೆಗಳು
* ಕುಕ್ : 5 ಹುದ್ದೆಗಳು
* ಫೈಯರ್‌ಮೆನ್ : 4 ಹುದ್ದೆಗಳು
* ಲೈಟ್ ವೆಹಿಕಲ್ ಡ್ರೈವರ್ : 4 ಹುದ್ದೆಗಳು
* ಹೆವಿ ವೆಹಿಕಲ್ ಡ್ರೈವರ್ : 5 ಹುದ್ದೆಗಳು
- ಒಟ್ಟು ಖಾಲಿ ಇರುವ ಹುದ್ದೆಗಳು : 182 ಹುದ್ದೆಗಳು

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 15 ಫೆಬ್ರವರಿ 2020
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06 ಮಾರ್ಚ್ 2020
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07 ಮಾರ್ಚ್ 2020

ಅರ್ಜಿ ಸಲ್ಲಿಸುವದು ಹೇಗೆ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಇಸ್ರೋ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
No. of posts:  182
Application Start Date:  15 ಫೆಬ್ರುವರಿ 2020
Application End Date:  6 ಮಾರ್ಚ್ 2020
Last Date for Payment:  7 ಮಾರ್ಚ್ 2020
Work Location:  ISRO, India
Qualification: ಹುದ್ದೆಗಳಿಗನುಗುಣವಾಗಿ SSLC / ಮೆಟ್ರಿಕ್ಯುಲೇಷನ್ / ITI / ಡಿಪ್ಲೋಮಾ / ಪದವಿ / ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು
Fee: * ಸಾಮಾನ್ಯ / OBC ಅಭ್ಯರ್ಥಿಗಳು 250/- ರೂ. ಶುಲ್ಕ
* ಮಹಿಳೆ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಮಾಜಿ ಸೈನಿಕ/ಅಂಗವಿಕಲ ಅಭ್ಯರ್ಥಿಗಳು ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
- ಆನ್‌ಲೈನ್ ಮೂಲಕ ಅಥವಾ ಹತ್ತಿರದ SBI ಶಾಖೆಗಳಲ್ಲಿ ಶುಲ್ಕ ಪಾವತಿಸಬಹುದು.
Age Limit: ಅರ್ಜಿ ಸಲ್ಲಿಸಲು ನೀಡಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಠ 35 ವರ್ಷ ವಯೋಮಿತಿಯೊಳಗಿನರಾಗಿರಬೇಕು.
* ಮೀಸಲಾತಿಗಳಿಗನುಗುಣವಾಗಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.
to download official notification ISRO Technical & non-Technical Recruitment

Comments