ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಸಂಘ ಬೆಂಗಳೂರು ಜಿಲ್ಲೆ ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ
Published by: Siddaram Halli | Date:16 ಫೆಬ್ರುವರಿ 2020

ಬೆಂಗಳೂರು ನಗರ ಜಿಲ್ಲೆಯಲ್ಲಿ 2019-20 ನೇ ಸಾಲಿನ ಎನ್.ಎಚ್.ಎಂ ಯೋಜನೆಯ ಪೌಷ್ಟಿಕ ಮತ್ತು ಸಮಗ್ರ ಹಾಲುಣಿಸುವ ನಿರ್ವಹಣಾ ಕೇಂದ್ರಗಳಿಗೆ ಅನುಮೋದನೆಯಾಗಿರುವ ವೈದ್ಯಕೀಯ ಹುದ್ದೆಗಳನ್ನು ಎನ್ಎಚ್ಎಂ ಮಾರ್ಗಸೂಚಿಗಳಂತೆ ಗುತ್ತಿಗೆ ಆಧಾರದ ಮೇಲೆ ನಿಯಮಾನುಸಾರ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿರುತ್ತದೆ. ಹುದ್ದೆಗಳ ವಿವರ : * ಸಿ.ಎಲ್.ಎಂ.ಸಿ ಸಹಾಯಕ ಸಿಬ್ಬಂದಿ * ಸಿ.ಎಲ್.ಎಂ.ಸಿ ಪ್ರಯೋಗ ಶಾಲಾ ತಂತ್ರಜ್ಞರು * ಡಯಟ್ ಕೌನ್ಸಿಲರ್ ಒಟ್ಟು ಹುದ್ದೆಗಳ ಸಂಖ್ಯೆ : 08 ಆಸಕ್ತ ಅಭ್ಯರ್ಥಿಗಳು ದಿನಾಂಕ 19 ಫೆಬ್ರುವರಿ 2020 ರಂದು ಬೆಳಗ್ಗೆ 11:30 ಗಂಟೆಗೆ ನಡೆಯುವ ನೇರ ಸಂದರ್ಶನದಲ್ಲಿ ತಮ್ಮ ಎಲ್ಲ ಮೂಲದಾಖಲಾತಿಗಳು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿ ಪ್ರತಿಯೊಂದಿಗೆ ಈ ಕೆಳಗೆ ನೀಡಿರುವ ವಿಳಾಸದಲ್ಲಿ ಹಾಜರಿರಬೇಕು. ಸಂದರ್ಶನಕ್ಕೆ ಹಾಜರಾಗಬೇಕಾದ ವಿಳಾಸ: ಜಿಲ್ಲಾ ಆರ್ ಸಿ ಎಚ್ ಅಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣ, ಹಳೇ ಟಿಬಿ ಆಸ್ಪತ್ರೆ, ಇಂದಿರಾನಗರ ಬೆಂಗಳೂರು - 560038 ಈ ನೇಮಕಾತಿ ಕುರಿತ ಹೆಚ್ಚಿನ ವಿವರಗಳಾದ ವಿದ್ಯಾರ್ಹತೆ, ವೇತನ, ವಯೋಮಿತಿ ಕುರಿತು ಮಾಹಿತಿಗಾಗಿ ಈ ಕೆಳಗೆ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ಮಾಡಿಕೊಂಡು ಅಭ್ಯರ್ಥಿಗಳು ಓದಿ ಕೊಳ್ಳಬಹುದಾಗಿದೆ.
No. of posts: 8
Application End Date: 19 ಫೆಬ್ರುವರಿ 2020
Work Location: ಬೆಂಗಳೂರು ನಗರ ಜಿಲ್ಲೆ
Employment Type: FULL_TIME
Hiring Organization: KPSC Vaani https://www.kpscvaani.com
Job Location: ಬೆಂಗಳೂರು ನಗರ ಜಿಲ್ಲೆ, KA,





Comments