ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ 2025ರ ಅಧಿಸೂಚನೆ ಪ್ರಕಟಗೊಂಡಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ

ಕೇಂದ್ರ ಶಿಕ್ಷಣ ಮಂಡಳಿಯ ಯಾವುದೇ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಅರ್ಹತೆ ಪಡೆಯಲು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಗೆ (CTET)ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ :23-10-2025 ರಿಂದ 09-11-2025 ರೊಳಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
💰ಅರ್ಜಿ ಶುಲ್ಕ: ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ 2025 ಕ್ಕೆ ನಿಗದಿಪಡಿಸಿದ ಪರೀಕ್ಷಾ ಶುಲ್ಕದ ವಿವರ ಈ ಕೆಳಗಿನಂತಿದೆ.
ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ
- ಪತ್ರಿಕೆ-1 ಅಥವಾ ಪತ್ರಿಕೆ-2 ಕ್ಕೆ ಮಾತ್ರ 700/-
- ಪತ್ರಿಕೆ-1 ಮತ್ತು ಪತ್ರಿಕೆ-2 ಕ್ಕೆ ರೂ 1000/-
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 ಅಭ್ಯರ್ಥಿಗಳಿಗೆ
- ಪತ್ರಿಕೆ-1 ಅಥವಾ ಪತ್ರಿಕೆ-2 ಕ್ಕೆ ಮಾತ್ರ 350/-
- ಪತ್ರಿಕೆ-1 ಮತ್ತು ಪತ್ರಿಕೆ-2 ಕ್ಕೆ ರೂ 500/-
📝ಪ್ರವೇಶ ಪತ್ರ:
# ಅಭ್ಯರ್ಥಿಗಳು KARTET-20250 ಪರೀಕ್ಷೆಯ ಪ್ರವೇಶ ಪತ್ರವನ್ನು ದಿನಾಂಕ: 01/12/2025 ರಿಂದ 07/12/2025 ರವರೆಗೆ ಇಲಾಖಾ ವೆಬ್‌ಸೈಟ್‌ನಲ್ಲಿ Login ಆಗಿ ಪಡೆದುಕೊಳ್ಳುವುದು.
# ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಸಲ್ಲಿಸಿರುವ ಮಾಹಿತಿಯು ಪ್ರವೇಶ ಪತ್ರದಲ್ಲಿ ನಮೂದಾಗಿರುತ್ತದೆ. ಆದ್ದರಿಂದ ಅಭ್ಯರ್ಥಿಗಳ ಮಾಹಿತಿ, ಭಾವಚಿತ್ರ ಹಾಗೂ ಅವರ ಸಹಿಗೆ ಸಂಬಂಧಪಟ್ಟಂತೆ ಏನಾದರೂ ವ್ಯತ್ಯಾಸವಿದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿರುವುದಿಲ್ಲ ಹಾಗೂ ಈ ಸಂಬಂಧ ಉದ್ಭವಿಸುವ ಸಮಸ್ಯೆಗಳಿಗೆ ಕೇಂದ್ರೀಕೃತ ದಾಖಲಾತಿ ಘಟಕವು ಜವಾಬ್ದಾರಿಯಾಗಿರುವುದಿಲ್ಲ.
# ಆದ್ದರಿಂದ ತಮ್ಮ 'Login' ಹಾಗೂ 'Password' ಅನ್ನು ಅತ್ಯಂತ ಗೌಪ್ಯವಾಗಿ ಜಾಗರೂಕತೆಯಿಂದ ಇಟ್ಟುಕೊಳ್ಳಲು ತಿಳಿಸಿದೆ.
📌 ಶಿಕ್ಷಕರ ಅರ್ಹತಾ ಪರೀಕ್ಷೆ-2025 ರ ಪರೀಕ್ಷಾ ವೇಳಾಪಟ್ಟಿ:
=> ಪರೀಕ್ಷೆ : 07/12/2025
* ಪತ್ರಿಕೆ-1
- ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.00 ಗಂಟೆಯವರೆಗೆ
- 2. ಗಂಟೆ 30 ನಿಮಿಷ
* ಪತ್ರಿಕೆ-2
- ಮಧ್ಯಾಹ್ನ 2.00 ರಿಂದ 4.30 ಗಂಟೆಯವರೆಗೆ
- 2. ಗಂಟೆ 30 ನಿಮಿಷ
* ಶಿಕ್ಷಕರ ಅರ್ಹತಾ ಪರೀಕ್ಷೆಯ ವಿಷಯ ಮತ್ತು ಸ್ವರೂಪ:
- ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು 2 ಪತ್ರಿಕೆಗಳನ್ನೊಳಗೊಂಡಿದೆ.
- ಪತ್ರಿಕೆ-1: 1 ರಿಂದ 5ನೇ ತರಗತಿ ಬೋಧಿಸುವ ಶಿಕ್ಷಕರಿಗಾಗಿ.
- ಪತ್ರಿಕೆ-2: 6 ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರಿಗಾಗಿ.
ಸೂಚನೆ: ಅಭ್ಯರ್ಥಿಯು 2 ಹಂತದ (1 ರಿಂದ 5 ಮತ್ತು 6 ರಿಂದ 8) ತರಗತಿಗಳ ಬೋಧನೆಗಾಗಿ ಅರ್ಹತೆ ಪಡೆಯಲು ಅಪೇಕ್ಷಿಸಿದಲ್ಲಿ ಮೇಲಿನ 2 ಪರೀಕ್ಷೆಗಳಲ್ಲಿ ಅಂದರೆ ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ.
- ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯು 150 ಅಂಕಗಳದ್ದಾಗಿದ್ದು, ಪ್ರತಿ ಪ್ರಶ್ನೆಗೆ ಅಂಕ ಒಟ್ಟು 150 ಬಹು ಆಯ್ಕೆ ಪ್ರಶ್ನೆಗಳನ್ನು (MCQs) ಒಳಗೊಂಡಿರುತ್ತದೆ. ಪ್ರತಿ ಪ್ರಶ್ನೆಗೆ ನಾಲ್ಕು ಆಯ್ಕೆಗಳಿದ್ದು ಒಂದು ಆಯ್ಕೆ ಮಾತ್ರ ಸರಿಯಾಗಿರುತ್ತದೆ. ಸರಿಯಾದ ಉತ್ತರವನ್ನು ಪ್ರಶ್ನೆಪತ್ರಿಕೆಯೊಂದಿಗೆ ನೀಡಲಾಗುವ OMR ಶೀಟುಗಳಲ್ಲಿ ಕ್ರಮವತ್ತಾಗಿ ಶೇಡ್ ಮಾಡಬೇಕು. ಋಣಾತ್ಮಕ ಮೌಲ್ಯಮಾಪನ (Negative Evaluation) ಇರುವುದಿಲ್ಲ.
* ಪ್ರಶ್ನೆ ಪತ್ರಿಕೆಯ ಮಾಧ್ಯಮ : ಭಾಷಾ ವಿಷಯಗಳ ಹೊರತಾಗಿ ಉಳಿದ ಎಲ್ಲಾ ವಿಷಯಗಳ ಪ್ರಶ್ನೆಗಳನ್ನು ಕನ್ನಡ, ಇಂಗ್ಲಿಷ್, ಉರ್ದು, ತಮಿಳು, ತೆಲುಗು, ಹಿಂದಿ ಮತ್ತು ಮರಾಠಿ ಮಾಧ್ಯಮಗಳಲ್ಲಿ ಮುದ್ರಿಸಲಾಗಿರುತ್ತದೆ. ಆದರೆ ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಆಯ್ಕೆ ಮಾಡಿಕೊಂಡ ಮಾಧ್ಯಮದಲ್ಲಿಯೇ ಉತ್ತರಿಸಬೇಕು.
📅 ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲುಸಲು ಪ್ರಾರಂಭದ ದಿನಾಂಕ : 23/10/2025
ಆನ್ ಲೈನ್ ಅರ್ಜಿ ಸಲ್ಲುಸಲು ಕೊನೆಯ ದಿನಾಂಕ : 09/11/2025
ಶುಲ್ಕ ಪಾವತಿಸಲು ಕೊನೆಯ ದಿನಾಂಕ (ಚಲನ್ ಆದಲ್ಲಿ) : 10/11/2025
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಪ್ರಾರಂಭದ ದಿನಾಂಕ : 01/12/2025
ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕೊನೆಯ ದಿನಾಂಕ : 07/12/2025
ಪರೀಕ್ಷಾ ದಿನಾಂಕ : 07/12/2025
ಪರೀಕ್ಷಾ ಕೇಂದ್ರ : ಪ್ರವೇಶ ಪತ್ರದಲ್ಲಿ ಸೂಚಿಸಿರುವಂತೆ
ಪರೀಕ್ಷೆಯ ದಿನದಂದು ತರಬೇಕಾದ ವಸ್ತುಗಳು : ಪ್ರವೇಶ ಪತ್ರ ಮತ್ತು ನೀಲಿ / ಕಪ್ಪು ಬಾಲ್ ಪಾಯಿಂಟ್ ಪೆನ್ನುಗಳು
📌ಅಭ್ಯರ್ಥಿಗಳಿಗೆ ಸೂಚನೆಗಳು:
1. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2025 ಕ್ಕೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು 'ಆನ್‌ಲೈನ್ ಮೂಲಕ ದಿನಾಂಕ: 23/10/2025 ರಿಂದ 09/11/2025ರ ಒಳಗಾಗಿ ಇಲಾಖಾ https://schooleducation.karnataka.gov.in ಅರ್ಜಿ ಸಲ್ಲಿಸುವುದು. login en
2. ಆನ್‌ಲೈನ್ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಪೂರ್ಣವಾಗಿ ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಪೂರ್ಣ ವಿವರಗಳನ್ನೊಳಗೊಂಡ ಅರ್ಜಿಯ ಕಂಪ್ಯೂಟರ್ ಜನರೇಟೆಡ್ ಪ್ರತಿಯ Print out ನ್ನು ಪಡೆದುಕೊಳ್ಳುವುದು.
3. ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಿದಲ್ಲಿ, ಅವರು ಹೆಚ್ಚುವರಿಯಾಗಿ ಸಲ್ಲಿಸುವ ಅರ್ಜಿಗೆ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕು.





Comments