Loading..!

ಬೆಂಗಳೂರು ಜಿಲ್ಲಾ ಪಂಚಾಯಿತಿಯಿಂದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ನೇಮಕಾತಿ
Tags: PUC
Published by: Surekha Halli | Date:3 ಸೆಪ್ಟೆಂಬರ್ 2020
not found
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿರುವ "ಆಯುಷ್ ಕ್ಷೇಮ ಕೇಂದ್ರ" ಗಳಿಗೆ ಯೋಗ ತರಬೇತಿದಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸಲು 11-09-2020 ಕೊನೆಯ ದಿನಾಂಕವಾಗಿದೆ.    

-  ಅರ್ಜಿ ನಮೂನೆಯನ್ನು "ಜಿಲ್ಲಾ ಆಯುಷ್ ಕಚೇರಿ, ಬೆಂಗಳೂರು" / ಸಂಬಂಧಿಸಿದ ಕ್ಷೇಮ ಕೇಂದ್ರದಿಂದ ಕಚೇರಿ ಸಮಯದಲ್ಲಿ ಆಗಸ್ಟ್ 25,2020 ರಿಂದ ಸೆಪ್ಟೆಂಬರ್ 4,2020 ರೊಳಗೆ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜಿಲ್ಲಾ ಆಯುಷ್ ಕಚೇರಿಗೆ ಸ್ವಯಂ ಆಗಿ /ನೊಂದಾಯಿತ ಅಂಚೆ ಮೂಲಕ ಸೆಪ್ಟೆಂಬರ್ 11,2020 ರ ಸಂಜೆ 5 ಗಂಟೆಯೊಳಗೆ ಅರ್ಜಿಯನ್ನು ಸಲ್ಲಿಸಬಹುದು. 
No. of posts:  4
Application Start Date:  25 ಆಗಸ್ಟ್ 2020
Application End Date:  11 ಸೆಪ್ಟೆಂಬರ್ 2020
Qualification: ವಿದ್ಯಾರ್ಹತೆ :ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು  10+2 ವಿದ್ಯಾರ್ಹತೆ ಜೊತೆಗೆ ಯೋಗ ತರಬೇತುದಾರರ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು.
Age Limit:
- ಕನಿಷ್ಟ 21 ವರ್ಷ ವಯಸ್ಸನ್ನು ಹೊಂದಿರಬೇಕು. 

-  ಗರಿಷ್ಟ 60 ವರ್ಷ ವಯಸ್ಸನ್ನು ಮೀರಿರಬಾರದು. 

 
Pay Scale:
- ಯೋಗ ತರಬೇತಿದಾರ ಹುದ್ದೆಗಳಿಗೆ ಮಾಸಿಕ 8,000/-ರೂ ವೇತನವನ್ನು ನೀಡಲಾಗುವುದು. 

 
To Download official Press Notification

Comments

Madhu B ಸೆಪ್ಟೆ. 11, 2020, 12:31 ಅಪರಾಹ್ನ