* ಬೂಕರ್ ಪ್ರಶಸ್ತಿ ವಿಜೇತರಾದ ಲೇಖಕಿ ಅರುಂಧತಿ ರಾಯ್‌ ರವರಿಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ 45ನೇ 'ಯುರೋಪಿಯನ್‌ ಎಸ್ಸೇ ಪ್ರೈಜ್‌' ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಚಾಲ್ಸ್‌ ವೈಲನ್‌ ಫೌಂಡೇಷನ್‌ ಪ್ರಕಟಿಸಿದೆ.* 'ಆಜಾದಿ' (2021) ಎಂಬ ಶೀರ್ಷಿಕೆಯ ಪ್ರಬಂಧಗಳ ಸಂಕಲನವನ್ನು ಫ್ರೆಂಚ್‌ ಅನುವಾದಕ್ಕಾಗಿ ರಾಯ್‌ ರವರಿಗೆ 'ಯುರೋಪಿಯನ್ ಎಸ್ಸೇ' ಎಂಬ ಪ್ರಶಸ್ತಿ ನೀಡಲಾಗುವುದು ಎಂದು ಫೌಂಡೇಷನ್‌ ತಿಳಿಸಿದೆ.* ಸ್ವಿಟ್ಜರ್ಲೆಂಡ್‌ನ ಲುಸಾನ್ ನಗರದಲ್ಲಿ ಸೆಪ್ಟೆಂಬರ್ 12ರಂದು ನಡೆಯುವ ಸಮಾರಂಭದಲ್ಲಿ ಅಂದಾಜು ₹ 18 ಲಕ್ಷ ಮೊತ್ತದೊಂದಿಗೆ ಪ್ರಶಸ್ತಿಯನ್ನು ಅರುಂಧತಿ ರಾಯ್ ರವರು ಸ್ವೀಕರಿಸಲಿದ್ದಾರೆ.