* ಜಾಗತಿಕ ಮಟ್ಟದಲ್ಲಿ ಕೊಡಮಾಡಲಾದ 'ಇಂಟರ್‌ನ್ಯಾಷನಲ್ ಯಂಗ್ ಇಕೊ- ಹಿರೋ' ಪ್ರಶಸ್ತಿಗೆ 2023 ನೇ ಸಾಲಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 17 ಯುವ ಪರಿಸರ ಕಾರ್ಯಕರ್ತರಿಗೆ ಪ್ರಶಸ್ತಿ ನೀಡಲಾಗಿದ್ದು, ಪ್ರಶಸ್ತಿ ಸ್ವೀಕರಿಸಿದವರಲ್ಲಿ ಬೆಂಗಳೂರಿನ ಯುವತಿ ಸೇರಿ ಭಾರತದ ಐವರು ಇದ್ದಾರೆ.* ಅಮೆರಿಕ ಮೂಲದ ಸರ್ಕಾರೇತರ ಸಂಸ್ಥೆ 'ಆ್ಯಕ್ಷನ್ ಫಾರ್ ನೇಚರ್' ಈ ಪ್ರಶಸ್ತಿ ನೀಡುತ್ತಿದ್ದು, ಇಂಟರ್‌ನ್ಯಾಷನಲ್ ಯಂಗ್ ಇಕೊ- ಹಿರೋ' ಪ್ರಶಸ್ತಿಗೆ  - ಬೆಂಗಳೂರಿನ ಮಾನ್ಯ ಹರೀಶ್ - ಮೀರತ್‌ನ ಐಹಾ ದೀಕ್ಷಿತ್ - ದೆಹಲಿಯ ನಿರ್ವಾಣ್ ಸೊಮಾನಿ ಮತ್ತು ಮನ್ನತ್ ಕೌರ್  - ಮುಂಬೈನ ಕರ್ಣವ್ ರಸ್ತೋಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.* ಈ ವರ್ಷದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮೀರತ್‌ನ ಐಹಾ ದೀಕ್ಷಿತ್ ಅವರು ಪಡೆದುಕೊಂಡಿದ್ದಾರೆ. ಇವರು ಸ್ವಯಂಸೇವಕರ ಸಹಾಯದೊಂದಿಗೆ ತಮ್ಮ “ಗ್ರೀನ್ ಐಹಾ ಸ್ಟೈಲ್‌ ಫೌಂಡೇಷನ್‌' ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ 20,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ.