* ವರ್ಲ್ಡ್ ವೈಡ್ ಫಂಡ್(WWF)'ಭಾರತದ ರಣಹದ್ದುಗಳ ಗಣತಿ - 2024'(Vulture count) ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು ಇದು ಸೆಪ್ಟೆಂಬರ್ 7 ರಿಂದ ಅಕ್ಟೋಬರ್ 6ರ ವರೆಗೆ ನಡೆಯಲಿದೆ.* ಈ ಉಪಕ್ರಮವು WWF-ಭಾರತವು ರಣಹದ್ದುಗಳ ಎಣಿಕೆ ಮತ್ತು ತೀವ್ರವಾಗಿ ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳ ಬಗ್ಗೆ ಜಾಗೃತಿ ಮೂಡಿಸುವ ಉಪಕ್ರಮವಾಗಿದೆ.* ನಮ್ಮ ಪರಿಸರ ವ್ಯವಸ್ಥೆಗಳಲ್ಲಿ ರಣಹದ್ದುಗಳ ಪ್ರಾಮುಖ್ಯತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.* ಸತ್ತ ಪ್ರಾಣಿಗಳನ್ನು ತಿನ್ನುವ ರಣಹದ್ದುಗಳು, ಪ್ರಕೃತಿಯನ್ನು ಶುಚಿಗೊಳಿಸುವ ಸಿಬ್ಬಂದಿಯಂತೆ ಕಾರ್ಯನಿರ್ವಹಿಸುತ್ತವೆ. ಈ ಮೂಲಕ ಮನುಷ್ಯರಲ್ಲಿ ರೋಗಗಳು ಹರಡದಂತೆ ತಡೆಯುವಲ್ಲಿ ನೆರವಾಗುತ್ತವೆ ಮತ್ತು ಪರಿಸರ ಸಮತೋಲನ ಕಾಪಾಡುತ್ತವೆ. ಎಂದು WWF-India ಆಗಸ್ಟ್ 30 ರಂದು ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಿದೆ.