Job Description: ➤ ಭಾರತ ಸರಕಾರ ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (Asian Development Bank - ADB) 230 ಮಿಲಿಯನ್ ಅಮೆರಿಕನ್ ಡಾಲರ್ ಸಾಲದ ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿವೆ. ತಮಿಳುನಾಡಿನ ಪ್ರಮುಖ ನಗರವಾದ ಚೆನ್ನೈನ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ನೈರ್ಮಲ್ಯ ವ್ಯವಸ್ಥೆಯನ್ನು ಹವಾಮಾನ ಬದಲಾವಣೆಗೆ ತಡೆದುಕೊಳ್ಳುವಂತೆ (Climate-Resilient) ಮೇಲ್ದರ್ಜೆಗೇರಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಹಿ ಮಾಡಿದ ಸಂಸ್ಥೆಗಳು: ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ (DEA) ಮತ್ತು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB). ಒಪ್ಪಂದಕ್ಕೆ ಸಹಿ ಹಾಕಿದವರು: ಭಾರತ ಸರ್ಕಾರದ ಪರವಾಗಿ ಆರ್ಥಿಕ ವ್ಯವಹಾರಗಳ ಇಲಾಖೆಯ ಉಪ ಕಾರ್ಯದರ್ಶಿ ಸೌರಭ್ ಸಿಂಗ್ ಮತ್ತು ADB ಪರವಾಗಿ ಭಾರತದ ಕಂಟ್ರಿ ಡೈರೆಕ್ಟರ್ ಮಿಯೋ ಓಕಾ (Mio Oka). ➤ ಯೋಜನೆಯಡಿ ನಡೆಯಲಿರುವ ಪ್ರಮುಖ ಅಭಿವೃದ್ಧಿ ಕಾರ್ಯಗಳು: ಪೈಪ್‌ಲೈನ್ ಜಾಲ ವಿಸ್ತರಣೆ: 170 ಕಿಲೋಮೀಟರ್‌ಗೂ ಅಧಿಕ ಉದ್ದದ ನೀರು ಸರಬರಾಜು ಮತ್ತು ಒಳಚರಂಡಿ (Sewerage) ಪೈಪ್‌ಲೈನ್‌ಗಳ ನಿರ್ಮಾಣ. ಪಂಪಿಂಗ್ ಸ್ಟೇಷನ್‌ಗಳ ಮೇಲ್ದರ್ಜೆ: 7 ಪ್ರಮುಖ ನೀರು ಸರಬರಾಜು ಪಂಪಿಂಗ್ ಸ್ಟೇಷನ್‌ಗಳು ಹಾಗೂ 38 ಒಳಚರಂಡಿ ಪಂಪಿಂಗ್ ಸ್ಟೇಷನ್‌ಗಳನ್ನು ಆಧುನೀಕರಣಗೊಳಿಸುವುದು. ರಿಂಗ್-ಮೈನ್ ಸಿಸ್ಟಮ್ (Ring-Main Solution): ಚೆನ್ನೈ ನಗರದಾದ್ಯಂತ ಸಮತೋಲಿತ ನೀರಿನ ಒತ್ತಡ (Balanced Water Pressure) ಕಾಯ್ದುಕೊಳ್ಳಲು ಮತ್ತು ಸಮಾನವಾಗಿ ನೀರು ಪೂರೈಸಲು ಕ್ಲೋಸ್ಡ್-ಲೂಪ್ ‘ರಿಂಗ್-ಮೈನ್’ ತಂತ್ರಜ್ಞಾನವನ್ನು ಅಳವಡಿಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಹೊಂದಲಿರುವ ಭಾರತದ ಮೊದಲ ನಗರ ಚೆನ್ನೈ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಡಿಜಿಟಲ್ ತಂತ್ರಜ್ಞಾನ ಮತ್ತು ಕಾರ್ಮಿಕರ ಸುರಕ್ಷತೆ: ಒಳಚರಂಡಿ ತಡೆಗಳನ್ನು ಕೃತಕ ಬುದ್ಧಿಮತ್ತೆ ಹಾಗೂ ರಿಯಲ್-ಟೈಮ್ ಮಾನಿಟರಿಂಗ್ ಮೂಲಕ ಪತ್ತೆಹಚ್ಚುವ ಡಿಜಿಟಲ್ ವ್ಯವಸ್ಥೆ ರೂಪಿಸಲಾಗುತ್ತದೆ. ಇದರಿಂದ ಅಪಾಯಕಾರಿ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ (ಕೈಯಿಂದ ಚರಂಡಿ ಶುಚಿಗೊಳಿಸುವುದು) ತಡೆಯಲು ಸಾಧ್ಯವಾಗುತ್ತದೆ. ➤ ಭಾರತ ಸರ್ಕಾರದ ಪ್ರಮುಖ ಯೋಜನೆಗಳೊಂದಿಗೆ ಜೋಡಣೆ: ಅಮೃತ್ 2.0 (AMRUT 2.0 - Atal Mission for Rejuvenation and Urban Transformation) ಅರ್ಬನ್ ಚಾಲೆಂಜ್ ಫಂಡ್ (Urban Challenge Fund)— ಇವುಗಳ ಗುರಿಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಲಿದೆ. ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ