Job Description: ➤ ಭಾರತೀಯ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC), ದೇಶದ ಎಲ್ಲಾ ನೋಂದಾಯಿತ ವೈದ್ಯರಿಗೆ ವಿಶಿಷ್ಟ ಗುರುತಿನ ಸಂಖ್ಯೆ (Unique Identification - UID) ನೀಡಲು ಪ್ರಸ್ತಾಪಿಸಿದೆ. NMC ಇತ್ತೀಚೆಗೆ 'ವೈದ್ಯಕೀಯ ಅಭ್ಯಾಸಕಾರರ ನೋಂದಣಿ ಮತ್ತು ವೈದ್ಯಕೀಯ ಚಿಕಿತ್ಸೆ ಅಭ್ಯಾಸ ಮಾಡಲು ಪರವಾನಗಿ ( ತಿದ್ದುಪಡಿ) ನಿಯಮಾವಳಿಗಳು, 2026' (Registration of Medical Practitioners and Licence to Practice Medicine (Amendment) Regulations, 2026) ಕರಡನ್ನು ಬಿಡುಗಡೆ ಮಾಡಿದೆ.➤ ಒಂದು ದೇಶ, ಒಂದು ಪರವಾನಗಿ" (One Nation, One Licence): ಪ್ರಸ್ತಾಪಿತ ನಿಯಮದಂತೆ, ಒಮ್ಮೆ ರಾಜ್ಯ ವೈದ್ಯಕೀಯ ಮಂಡಳಿಯಲ್ಲಿ (State Medical Council) ನೋಂದಾಯಿಸಿಕೊಂಡು ಯುಐಡಿ (UID) ಪಡೆದ ವೈದ್ಯರು, ದೇಶದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರತ್ಯೇಕ ನೋಂದಣಿ ಇಲ್ಲದೆ ಚಿಕಿತ್ಸೆ ನೀಡಲು ಅರ್ಹರಾಗುತ್ತಾರೆ. ಪ್ರಸ್ತುತ ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿತ್ತು, ಹೊಸ ವ್ಯವಸ್ಥೆಯಿಂದ ಈ ಶ್ರಮ ತಪ್ಪಲಿದೆ. ➤ ಯುಐಡಿ ಸಂಖ್ಯೆ ರಚನೆ (UID Generation): ಈ ಯುಐಡಿ ಸಂಖ್ಯೆಯನ್ನು ಎನ್‌ಎಂಸಿಯ 'ಎಥಿಕ್ಸ್ ಮತ್ತು ಮೆಡಿಕಲ್ ರಿಜಿಸ್ಟ್ರೇಷನ್ ಬೋರ್ಡ್' (EMRB) ಕೇಂದ್ರೀಕೃತವಾಗಿ ನೀಡುತ್ತದೆ. ಯುಐಡಿಯಲ್ಲಿ ಸಂಬಂಧಪಟ್ಟ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಕೋಡ್ ಹಾಗೂ ರಾಜ್ಯ ವೈದ್ಯಕೀಯ ಮಂಡಳಿಯ ನೋಂದಣಿ ಸಂಖ್ಯೆ ಒಳಗೊಂಡಿರುತ್ತದೆ. ➤ ರಾಷ್ಟ್ರೀಯ ವೈದ್ಯಕೀಯ ನೋಂದಣಿ (National Medical Register - NMR): ರಾಜ್ಯ ಮತ್ತು ರಾಷ್ಟ್ರೀಯ ವೈದ್ಯಕೀಯ ನೋಂದಣಿ ಪುಸ್ತಕಗಳು ಎಲೆಕ್ಟ್ರಾನಿಕ್ ರೂಪದಲ್ಲಿ ಪರಸ್ಪರ ಬೆಸೆಯಲ್ಪಡುತ್ತವೆ (Automatic Electronic Synchronisation). ಒಂದು ಕಡೆ ಬದಲಾವಣೆಯಾದರೆ ಅದು ಸ್ವಯಂಚಾಲಿತವಾಗಿ ಮತ್ತೊಂದು ರಿಜಿಸ್ಟರ್‌ನಲ್ಲೂ ಅಪ್‌ಡೇಟ್ ಆಗುತ್ತದೆ. ಇದರಲ್ಲಿ ವೈದ್ಯರ ಶೈಕ್ಷಣಿಕ ಅರ್ಹತೆ, ಪರವಾನಗಿ ಸ್ಥಿತಿ, ಹಾಗೂ ಶಿಸ್ತುಕ್ರಮಗಳ (ಅಮಾನತು/ರದ್ದು) ಮಾಹಿತಿಯೂ ಸಾರ್ವಜನಿಕವಾಗಿ ಲಭ್ಯವಿರುತ್ತದೆ. ➤ ಚಾಲ್ತಿಯಲ್ಲಿರುವ ವೈದ್ಯರಿಗೆ ಉಚಿತ ಅವಕಾಶ: ಈಗಾಗಲೇ ನೋಂದಾಯಿತರಾಗಿರುವ ವೈದ್ಯರು ಯುಐಡಿ ಪಡೆಯಲು EMRB ಪೋರ್ಟಲ್‌ನಲ್ಲಿ ತಮ್ಮ ವಿವರಗಳನ್ನು ನವೀಕರಿಸಬೇಕು. ಈ ಒನ್‌ಟೈಮ್ ಪ್ರಕ್ರಿಯೆಗೆ ಯಾವುದೇ ಶುಲ್ಕ ಇರುವುದಿಲ್ಲ.➤ ಲೈಸೆನ್ಸ್ ಸಿಂಧುತ್ವ (Licence Validity): ವೈದ್ಯಕೀಯ ಅಭ್ಯಾಸದ ಪರವಾನಗಿಯು 5 ವರ್ಷಗಳ ಕಾಲ ಸಿಂಧುವಾಗಿರುತ್ತದೆ. ಅವಧಿ ಮುಗಿದ 3 ತಿಂಗಳೊಳಗೆ ನವೀಕರಿಸದಿದ್ದರೆ 'ಇನ್‌ಆಕ್ಟಿವ್' (Inactive) ಎಂದು ಗುರುತಿಸಲಾಗುತ್ತದೆ. KAS, PSI, PC, FDA, SDA, RRB, PDO ಸೇರಿದಂತೆ ಇನ್ನಿತರ ಪರೀಕ್ಷೆಗಳ ಹಳೆ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಲು ಇಲ್ಲಿ ಕ್ಲಿಕ್ ಮಾಡಿ