* ಭಾರತ ಕ್ರಿಕೆಟ್‌ ತಂಡದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ ಅವರು ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಐವರು ಸದಸ್ಯರ ಸಮಿತಿಯಲ್ಲಿ ಸಲೀಲ್ ಅಂಕೋಲಾ ಅವರ ಬದಲಿಗೆ ರಾತ್ರಾ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೇಮಿಸಿದೆ. * ಅಜಿತ್ ಅಗರ್‌ಕರ್ ನೇತೃತ್ವದ ಸಮಿತಿಯಲ್ಲಿ ರಾತ್ರಾ ಅವರು ಉತ್ತರ ವಲಯದ ಪ್ರತಿನಿಧಿಯಾಗಿದ್ದಾರೆ. * 42ರ ಪ್ರಾಯದ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ಅಜಯ್ ರಾತ್ರಾ ಅವರು ಹರಿಯಾಣ ಪರ ದೇಶಿ ಕ್ರಿಕೆಟ್‌ನಲ್ಲಿ 99 ಪ್ರಥಮ ದರ್ಜೆ ಪಂದ್ಯಗಳು, 89 ಲಿಸ್ಟ್ ‘ಎ’ ಪಂದ್ಯಗಳು ಮತ್ತು 17 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಜಯ್ ರಾತ್ರಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 4029 ರನ್, ಲಿಸ್ಟ್ ‘ಎ’ ನಲ್ಲಿ 1381 ರನ್ ಮತ್ತು ಟಿ20 ಕ್ರಿಕೆಟ್‌ನಲ್ಲಿ 191 ರನ್ ಗಳಿಸಿದ್ದಾರೆ.* ರಾತ್ರಾ ಅವರು ದೇಶಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅನುಭವವನ್ನು ಹೊಂದಿದ್ದಾರೆ. ಭಾರತ ಪರ ಆಡಿದ 6 ಟೆಸ್ಟ್ ಪಂದ್ಯಗಳಲ್ಲಿ ಅಜಯ್ ರಾತ್ರಾ 18ರ ಸರಾಸರಿಯಲ್ಲಿ 163 ರನ್ ಗಳಿಸಿದ್ದರು. ಅವರ ಹೆಸರಿನಲ್ಲಿ ಟೆಸ್ಟ್‌ನಲ್ಲಿ ಶತಕವೂ ಇದೆ. ಇದಲ್ಲದೇ 12 ಏಕದಿನ ಪಂದ್ಯಗಳಲ್ಲಿ ರಾತ್ರಾ ಅವರ ಬ್ಯಾಟ್‌ನಿಂದ 90 ರನ್‌ಗಳು ಮೂಡಿ ಬಂದಿವೆ ಎಂದು ಬಿಸಿಸಿಐ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.* ಅವರು 2002-03 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 115 ರನ್ ಗಳಿಸಿದರು ಮತ್ತು ಟೆಸ್ಟ್ ಶತಕ ಗಳಿಸಿದ ಅತ್ಯಂತ ಕಿರಿಯ ವಿಕೆಟ್ ಕೀಪರ್ ಎನಿಸಿಕೊಂಡರು. ಅವರು ಸಾಗರೋತ್ತರ ಸರಣಿಯಲ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ವಿಕೆಟ್ ಕೀಪರ್ ಕೂಡ ಆಗಿದ್ದರು.* ರಾತ್ರಾ ಅವರು ಅಸ್ಸಾಂ, ಪಂಜಾಬ್ ಮತ್ತು ಉತ್ತರ ಪ್ರದೇಶದ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಅವರು 2023 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ODI ಸರಣಿಯ ಸಮಯದಲ್ಲಿ ಭಾರತೀಯ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಿದ್ದರು.