* ಭಾರತದ ರಿಸರ್ವ್ ಬ್ಯಾಂಕ್ ಮತ್ತು ಇಂಡೋನೇಷ್ಯಾದ ಬ್ಯಾಂಕ್ ಎರಡು ದೇಶಗಳ ನಡುವೆ ಇರುವ ದ್ವಿಪಕ್ಷೀಯ ಒಪ್ಪಂದ ವಾಣಿಜ್ಯದಲ್ಲಿ  ಸ್ಥಳೀಯ ಕರೆನ್ಸಿ ಬಳಕೆಯನ್ನು ಪ್ರೋತ್ಸಾಹಿಸಲು ಒಪ್ಪಂದಕ್ಕೆ RBI ಗವರ್ನರ್ ಶಕ್ತಿಕಾಂತ ದಾಸ್ ಮತ್ತು ಇಂಡೋನೇಷ್ಯಾದ ಗವರ್ನರ್ ಪೆರ್ರಿ ವಾರ್ಜಿಯೋ ಸಹಿ ಹಾಕಿದ್ದಾರೆ.* ಭಾರತದ ರೂಪಾಯಿ ಹಾಗೂ ಇಂಡೋನೇಷ್ಯಾ ಕರೆನ್ಸಿ ರೂಪಿಯಕ್ಕೆ ಉತ್ತೇಜನ ನೀಡುವ ಒಪ್ಪಂದ ನೆರವಾಗಲಿದ್ದು, ಈ ಮೂಲಕ ಎರಡು ದೇಶಗಳ ಕರೆನ್ಸಿಗಳು ಬಲಗೊಳ್ಳಲಿವೆ.   * ರಫ್ತುದಾರರು ಮತ್ತು ಆಮದುದಾರರು ಇನ್ ವಾಯ್ಸ್ ಸೃಷ್ಟಿಸಿ ಸ್ಥಳೀಯ ಕರೆನ್ಸಿಗಳಲ್ಲಿ ಪಾವತಿ ಮಾಡಬಹುದಾಗಿದೆ ಎಂದು ಆರ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.* ಎರಡು ದೇಶಗಳ ನಡುವೆ ಚಾರಿತ್ರಿಕ ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳು ಕಟ್ಟಿಕೊಳ್ಳಲು ನೆರವಾಗುತ್ತದೆ ಮತ್ತು ಉಭಯ ದೇಶಗಳ ನಡುವಿನ ದ್ವಿಪಕ್ಷಿಯ ವಹಿವಾಟುಗಳು ಸುಗಮವಾಗಿ ನಡೆಯುತ್ತವೆ. ಇದರ ಜೊತೆಗೆ ವ್ಯಾಪಾರ ಹಾಗೂ ವಿದೇಶಿ ವಿನಿಮಯ ಮಾರುಕಟ್ಟೆಯ ಬೆಳವಣಿಗೆ ಈ ಮೂಲಕ ಸಹಕಾರಿಯಾಗಲಿದೆ ಎಂದು ತಿಳಿಸಿದೆ.