* ದಕ್ಷಿಣ ಆಫ್ರಿಕಾದ ಮರಾಯಸ್ ಎರಾಸ್ಮಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪೈರ್ ರಿಂಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 60 ವರ್ಷದ ಎರಾಸ್ಮಸ್ ಅವರು ಎಮಿರೇಟ್ಸ್ ಐಸಿಸಿ ಎಲೈಟ್ ಅಂಪೈರ್‌ಗಳ ಪಾನೆಲ್‌ನಿಂದ ನಿವೃತ್ತರಾಗುವ ನಿರ್ಧಾರ ಪ್ರಕಟಿಸಿದ್ದಾರೆ.* ಮರಾಯಸ್ ಎರಾಸ್ಮಸ್ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.* ಎರಾಸ್ಮಸ್ ಅವರಿಗೆ ಕ್ರಿಕೆಟ್ ಅಂಪೈರ್ ಗಳ ಪ್ರತಿಷ್ಠಿತ ಪ್ರಶಸ್ತಿಯಾದ ಡೇವಿಡ್ ಶೆಫರ್ಡ್ ಟ್ರೋಫಿಯನ್ನು ಮೂರು ಬಾರಿ ನೀಡಿ ಗೌರವಿಸಲಾಗಿದೆ. * ಎರಾಸ್ಮಸ್ ಮೂರು ಬಾರಿ (2016, 2017 ಮತ್ತು 2021 ರಲ್ಲಿ) ಐಸಿಸಿ ವರ್ಷದ ಅಂಪೈರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐದು ಬಾರಿ ಪ್ರಶಸ್ತಿಯನ್ನು ಗೆದ್ದ ಆಸ್ಟ್ರೇಲಿಯಾದ ಸೈಮನ್ ಟೌಫೆಲ್ ನಂತರ ಎರಡನೇ ಸ್ಥಾನದಲ್ಲಿ ಎರಾಸ್ಮಸ್ ಇದ್ದಾರೆ.* ವಿಶ್ವದ ಅತ್ಯುತ್ತಮ ಅಂಪೈರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಎರಾಸ್ಮಸ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ 2006 ರ ಟಿ 20ಐ ನಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಪುರುಷರ ಕ್ರಿಕೆಟ್ 80 ಟೆಸ್ಟ್, 124 ಏಕದಿನ ಮತ್ತು 43 ಟಿ 20 ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದಾರೆ.* ಮರಾಯಸ್ ಎರಾಸ್ಮಸ್ ಅವರು ಒಟ್ಟು 380 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದಾರೆ. ಇದರಲ್ಲಿ 131 ಪಂದ್ಯಗಳಲ್ಲಿ ಟಿವಿ ಅಂಪೈರ್ ಅಗಿದ್ದರು. ಅತಿ ಹೆಚ್ಚು ಟೆಸ್ಟ್ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದವರಲ್ಲಿ ಮರಾಯಸ್ ಎರಾಸ್ಮಸ್ ಅವರು 10ನೇ ಸ್ಥಾನದಲ್ಲಿದ್ದಾರೆ.