* ಮಾರ್ಚ 7 ರಂದು ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಫ್ರಾಗ್ ಮಾಸ್ಟರ್ಸ್ ಚೆಸ್ ಟೂರ್ನಿಯ 8 ನೇ ಸುತ್ತಿನಲ್ಲಿ ಜರ್ಮನಿಯ ವಿನ್ಸೆಂಟ್ ಕೀಮರ್ ಅವರನ್ನು ಸೋಲಿಸಿದರು.* ಫ್ರಾಗ್ ಮಾಸ್ಟರ್ಸ್ ಚೆಸ್  ಟೂರ್ನಿಯನ್ನು ಇನ್ನೂ ಒಂದು ಸುತ್ತು ಉಳಿದಿರುವಂತೆ ಉಜ್ಬೆಕಿಸ್ತಾನದ ನಾದಿರ್ಬೆಕ್ ಅಬ್ಬುಸತ್ತಾರೋ ಅವರು ಗೆದ್ದುಕೊಂಡರು.*  ನಾದಿರ್ಬೆಕ್  ಅವರು ಎಂಟನೇ ಸುತ್ತಿನಲ್ಲಿ ಇರಾನ್‌ನ ಪರ್ಹಾಮ್ ಮಘಸೂಡ್ಡು  ಅವರನ್ನು ಮಣಿಸಿದರು. * ಉಜ್ಬೆಕಿಸ್ತಾನದ ನಾದಿರ್ಬೆಕ್ ಅಬ್ಬುಸತ್ತಾರೋ ಅವರು ಆರು ಪಾಯಿಂಟ್ಸ್ ಸಂಗ್ರಹಿಸಿದ್ದು ಇತರರಿಗಿಂತ 1.5 ಪಾಯಿಂಟ್ಸ್ ಮುಂದಿರುವ ಕಾರಣ ಪ್ರಶಸ್ತಿ ಗೆಲ್ಲುವುದು ಖಚಿತವಾಯಿತು. ಜೊತೆಗೆ ಇಲ್ಲಿನ ಅಮೋಘ ಪ್ರದರ್ಶನಕ್ಕೆ ಹೆಚ್ಚು ಪಾಯಿಂಟ್ ಗಳಸಿದ್ದರಿಂದ ವಿಶ್ವಕ್ರಮಾಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಲಿದ್ದಾರೆ.* ಭಾರತದ ಇನ್ನೊಬ್ಬ ಆಟಗಾರ ವಿದಿತ್ ಗುಜರಾತಿ ರುಮೇನಿಯಾದ ರಿಚರ್ಡ್ ಯಾಪೋರ್ಟ್ ಜೊತೆ ಡ್ರಾ ಮಾಡಿಕೊಂಡರು. * ಮಘಸೂಡ್ಲು, ಪ್ರಜ್ಞಾನಂದ ಮತ್ತು ಝಕ್ ರಿಪಬ್ಲಿಕ್‌ನ ಎನ್ಗುಯೆನ್ ಥಾ ದೈವಾನ್ ಅವರು ತಲಾ 4.5 ಪಾಯಿಂಟ್‌ಗಳೊಡನೆ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.* ಕೀಮರ್ ವಿರುದ್ಧ ಗುಕೇಶ್ (4) ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿ  27 ನಡೆಗಳಲ್ಲಿ ಜಯಗಳಿಸಿದರು. ಕೀಮರ್ ಮತ್ತು ಬಾರ್ಟೆಲ್ ತಲಾ ಮೂರು ಅಂಕ ಗಳಿಸಿದ್ದಾರೆ. ಎನ್ಸುಯೆನ್ ಜೊತೆ ಡ್ರಾ ಮಾಡಿಕೊಂಡ ಸ್ಥಳೀಯ ಆಟಗಾರ ಡೇವಿಡ್ ನವಾರ ಸಹ ನಾಲ್ಕು ಅಂಕ ಗಳಿಸಿದ್ದಾರೆ.