Job Description: * ಸ್ಲೀಪರ್ ಬರ್ತ್ ಸೌಲಭ್ಯವಿರುವ ವಂದೇ ಭಾರತ್ ರೈಲು ಈ ವರ್ಷಾಂತ್ಯಕ್ಕೆ ಸಿದ್ಧವಾಗುತ್ತದೆ ಹಾಗೂ ಒಂದು ವರ್ಷದಲ್ಲಿ ಮೊದಲ ವಂದೇ ಮೆಟ್ರೋ ಸಿದ್ಧವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರವರು ಹೇಳಿದ್ದಾರೆ. * 2026ರ ಜುಲೈ-ಆಗಸ್ಟ್‌ನಲ್ಲಿ ಬುಲೆಟ್ ರೈಲು ದೇಶದಲ್ಲಿ ಮೊದಲ ಬಾರಿ ಸಂಚಾರ ನಡೆಸುವ ನಿರೀಕ್ಷಿಯಿದೆ. ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯು ವೇಗವಾಗಿ ಸಾಗುತ್ತಿದೆ. ಪ್ರಸ್ತುತ ವಂದೇ ಭಾರತ್ ರೈಲುಗಳು 500-600 ಕಿಮೀ ಪ್ರಯಾಣ ಪೂರೈಸುತ್ತವೆ. ವಂದೇ ಮೆಟ್ರೋ ಶಟಲ್ 100 ಕಿಮೀ ಮಾರ್ಗಗಳಲ್ಲಿ ಸಂಚರಿಸಬಹುದು.* ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಯಡಿ 140 ಕಿಮೀ ಪಿಲ್ಲರ್ ಗಳನ್ನು ನಿರ್ಮಿಸಲಾಗಿದೆ. ಎಂಟು ನದಿಗಳಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ.