Job Description: * ಬೆಟ್ಟಿಂಗ್, ಜೂಜು ಹಾಗೂ ಅಕ್ರಮ ಸಾಲ ವಿತರಣೆಯಲ್ಲಿ ತೊಡಗಿದ್ದ ಒಟ್ಟು 232 ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಈ ಆ್ಯಪ್‌ಗಳನ್ನು ಚೀನೀಯರು ಸೇರಿದಂತೆ ವಿದೇಶಿಯರು ನಿಯಂತ್ರಿಸುತ್ತಿ ದ್ದರು ಎಂದು ಹೇಳಲಾಗಿದೆ.* ಬೆಟ್ಟಿಂಗ್, ಜೂಜು ಹಾಗೂ ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿದ್ದ ಒಟ್ಟು 138 ಅಪ್‌ಗಳನ್ನು ನಿರ್ಬಂಧಿಸುವ ಆದೇಶವನ್ನು ಫೆ.04 ರಂದು ಹೊರಡಿಸಲಾಗಿದೆ. ಅಕ್ರಮ ಸಾಲ ವಿತರಣೆಯಲ್ಲಿ ತೊಡಗಿದ್ದ 94 ಆ್ಯಪ್‌ಗಳನ್ನು ನಿರ್ಬಂಧಿಸುವ ಆದೇಶನ್ನು ಪ್ರತ್ಯೇಕವಾಗಿ ಹೊರಡಿಸಲಾಗಿದೆ. ಈ ಆ್ಯಪ್‌ಗಳನ್ನು ಚೀನಾ ಒಳಗೊಂಡಂತೆ ಬೇರೆ ದೇಶಗಳಿಂದ ನಿಯಂತ್ರಿಸಲಾಗುತ್ತಿತ್ತು. * ಕೇಂದ್ರ ಗೃಹ ಸಚಿವಾಲಯದಿಂದ ಬಂದ ಸೂಚನೆ ಆಧರಿಸಿ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ತಿಳಿಸಿದ್ದಾರೆ. ಸಚಿವಾಲಯವು ಆ್ಯಪ್‌ಗಳನ್ನು ನಿರ್ಬಂಧಿಸುವ ಆದೇಶ ಹೊರಡಿಸಿದೆ.