* ಟ್ರಿನಿಡಾಡಿಯನ್ (ದ್ವೀಪರಾಷ್ಟ್ರದ) ಹಿರಿಯ ರಾಜತಾಂತ್ರಿಕ ಡೆನ್ನಿಸ್ ಫ್ರಾನ್ಸಿಸ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. * 193-ಸದಸ್ಯ ಅಸೆಂಬ್ಲಿಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅವರು ತನ್ನ ಅಧಿಕಾರಾವಧಿಯಲ್ಲಿ ಶಾಂತಿ, ಸಮೃದ್ಧಿ, ಪ್ರಗತಿ ಮತ್ತು ಸುಸ್ಥಿರತೆಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದರು.* ಫ್ರಾನ್ಸಿಸ್ ಪ್ರಸ್ತುತ ಟ್ರಿನಿಡಾಡ್‌ನ ಖಾಯಂ ಪ್ರತಿನಿಧಿಯಾಗಿದ್ದಾರೆ. ಅವರ 40 ವರ್ಷಗಳ ರಾಜತಾಂತ್ರಿಕ ವೃತ್ತಿಜೀವನದಲ್ಲಿ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಸಭೆಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ.* ಟ್ರಿಸಿಡಾಡ್ ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ಗುಂಪಿನ ಸದಸ್ಯರಾಗಿದ್ದಾರೆ: ಫ್ರಾನ್ಸಿಸ್ ಅವರು ಹಂಗೇರಿಯನ್ ರಾಜತಾಂತ್ರಿಕ ಸಿಸಾಬಾ ಕೊರೊಸಿ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.