* ಜರ್ಮನಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಸಮ್ಮೇಳನದಲ್ಲಿ (ISC 2023) ಭಾರತದ ಕೃತಕ ಬುದ್ಧಿಮತ್ತೆ ಸೂಪರ್‌ ಕಂಪ್ಯೂಟರ್ ಐರಾವತ್ (AIRAWAT Super Computer) ಜಗತ್ತಿನಲ್ಲೇ 75ನೇ ಸ್ಥಾನದಲ್ಲಿದೆ.* ಮಹಾರಾಷ್ಟ್ರದ ಪುಣೆಯ ಸಿ-ಡಾಕ್‌ನಲ್ಲಿ ಈ ಐರಾವತ್ ಸೂಪರ್ ಕಂಪ್ಯೂಟರ್ ಸ್ಥಾಪಿಸಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟಾಪ್ 500 ಗ್ಲೋಬಲ್ ಸೂಪರ್‌ ಕಂಪ್ಯೂಟಿಂಗ್ ಪಟ್ಟಿಯ 61ನೇ ಆವೃತ್ತಿಯಲ್ಲಿ ಭಾರತದ ಸೂಪರ್‌ಕಂಪ್ಯೂಟರ್ ಸ್ಥಾನವನ್ನು ಪಡೆದುಕೊಂಡಿದೆ. * ಐರಾವತ್ ಪಿಎಸ್‌ಎಐ, 3,170 ಟೆರಾಫ್ಲಾಪ್‌ಗಳ ಗಮನಾರ್ಹ ವೇಗದೊಂದಿಗೆ ಭಾರತದ ಅತಿದೊಡ್ಡ ಮತ್ತು ವೇಗವಾದ ಕೃತಕ ಬುದ್ಧಿಮತ್ತೆಯಾಧರಿತ ಸೂಪರ್‌ಕಂಪ್ಯೂಟಿಂಗ್ ವ್ಯವಸ್ಥೆಯಾಗಿದೆ.