* ಸೋಂಕಿತ ಸೊಳ್ಳೆಗಳಿಂದ ಹರಡುವ ವೈರಸ್ ಚಿಕೂನ್‌ಗುನ್ಯಾಗೆ ವಿಶ್ವದ ಮೊದಲ ಲಸಿಕೆಯನ್ನು ಯುಎಸ್ ಆರೋಗ್ಯ ಅಧಿಕಾರಿಗಳು ಗುರುವಾರ ನವೆಂಬರ್ 9 ರಂದು ಅನುಮೋದಿಸಿದ್ದಾರೆ. * ಚಿಕುನ್‌ಗುನ್ಯಾ ವೈರಸ್‌ ಅನ್ನು ಆಹಾರ ಮತ್ತು ಔಷಧ ಆಡಳಿತವು "ಹೊಸ ಜಾಗತಿಕ ಆರೋಗ್ಯ ಬೆದರಿಕೆ" ಎಂದು ಕರೆದಿದೆ.* ಚಿಕೂನ್‌ಗುನ್ಯಾ ವೈರಸ್ ಸೋಂಕು ಅನೇಕ ಗಂಭೀರ ಸಮಸ್ಯೆ ಮತ್ತು ದೀರ್ಘಾವಧಿ ಆರೋಗ್ಯ ಸಮಸ್ಯೆಗೆ ಕಾರಣವಾಗಬಹು ಅದರಲ್ಲೂ ವಯಸ್ಕರಲ್ಲಿ ಇದು ವೈದ್ಯಕೀಯ ಪರಿಸ್ಥಿತಿಯನ್ನುಂಟು ಮಾಡಬಹುದು ಎಂದು ಎಫ್‌ಡಿಎ ಸೆಂಟರ್ ಫಾರ್ ಬಯೋಲಾಜಿಕಲ್ ಎವಲೂಷನ್ ಅಂಡ್ ರಿಸರ್ಚ್‌ನ ನಿರ್ದೇಶಕ ಪೀಟರ್ ಮಾರ್ಕ್ಸ್ ತಿಳಿಸಿದ್ದಾರೆ.* ಯುರೋಪ್‌ನ ವಾಲ್ನೆವಾ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಇಕ್ಸ್‌ಚಿಕ್ ಹೆಸರಿನಲ್ಲಿ ಮಾರಾಟ ಮಾಡಲಾಗುವುದು, ಇದನ್ನು 18 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಅನುಮೋದಿಸಲಾಗಿದೆ ಎಂದು FDA ಹೇಳಿದೆ.* ಚಿಕೂನ್‌ಗುನ್ಯಾ ಆಫ್ರಿಕಾದ ಉಷ್ಣ ಮತ್ತು ಉಷೋತ್ಸವಲಯ ಪ್ರದೇಶ, ವಾಯುವ್ಯ ಏಷ್ಯಾ ಮತ್ತು ಅಮೆರಿಕದ ಕೆಲವು ಸ್ಥಳಗಳಲ್ಲಿ ಕಂಡು ಬಂದಿದ್ದು, ಸ್ಥಳೀಯ ಸೊಳ್ಳೆಗಳು ಈ ವೈರಸ್‌ಗೆ ಪ್ರಮುಖ ಕಾರಣಬಾಗಿದೆ.* ಚಿಕೂನ್‌ಗುನ್ಯಾ ವೈರಸ್‌ನ ಸಾಮಾನ್ಯ ಲಕ್ಷಣ ಜ್ವರ ಮತ್ತು ಕೀಲು ನೋವಾಗಿದೆ. ಇದರ ಹೊರತಾಗಿ ರ್ಯಾಶಸ್, ತಲೆನೋವು ಮತ್ತು ಸ್ನಾಯು ನೋವು ಕಾಣಿಸಲಿದೆ. ಚಿಕೂನ್‌ಗುನ್ಯಾ ವೈರಸ್ ನವಜಾತ ಶಿಶುಗಳಿಗೆ ಮತ್ತು ಗರ್ಭಿಣಿಯರಿಗೆ ಗಂಭೀರ ಅಪಾಯ ತಂದೊಡ್ಡುತ್ತದೆ.